Breaking News

ಬೆಂಗಳೂರು: ವೃದ್ಧೆಗೆ ನಿದ್ದೆ ಮಾತ್ರೆ ಬೆರೆಸಿದ ಟೀ ಕುಡಿಸಿ ಚಿನ್ನಾಭರಣ ಕಳವು

ಬೆಂಗಳೂರು: ಮೈಸೂರು ರಸ್ತೆಯ ಸ್ಯಾಟಲೈಟ್‌ ಬಸ್‌ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ವೃದ್ಧೆಯನ್ನು ಸಲುಗೆಯಿಂದ ಮಾತನಾಡಿಸಿ, ನಿದ್ದೆ ಮಾತ್ರೆ ಬೆರೆಸಿದ ಟೀ ಕುಡಿಸಿ ₹3 ಲಕ್ಷ ಮೌಲ್ಯದ 30 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾನೆ. ಈ ಕುರಿತು ಚನ್ನಮ್ಮ ಎಂಬುವರು ಬ್ಯಾಟರಾಯನಪುರ ಠಾಣೆಗೆ ದೂರು ನೀಡಿದ್ದಾರೆ. ಸೆ.25ರಂದು ಮಗಳ ಮನೆಗೆ ತೆರಳಲು ಸ್ಯಾಟಲೈಟ್‌ ಬಸ್‌ ನಿಲ್ದಾಣಕ್ಕೆ ಬಂದಿದ್ದ ಚನ್ನಮ್ಮ, ಮೈಸೂರಿನ ಬಸ್‌ಗೆ ಹತ್ತಿದ್ದರು. ಅದೇ ಬಸ್‌ಗೆ ಹತ್ತಿದ ಅಪರಿಚಿತ ವ್ಯಕ್ತಿ ಅವರೊಂದಿಗೆ ಸಲುಗೆಯಿಂದ ಮಾತನಾಡಿ, ಬಳಿಕ ಎರಡು ಕಪ್‌ ಟೀ ತಂದು ಕುಡಿಯುವಂತೆ ಒತ್ತಾಯಿಸಿದ್ದಾನೆ. ಆತನ ಮಾತನ್ನು ನಂಬಿ ಟೀ ಕುಡಿದ ಕೆಲವೇ ಸಮಯದಲ್ಲಿ ಚನ್ನಮ್ಮ ನಿದ್ದೆಗೆ ಜಾರಿದ್ದಾರೆ. ಈ ವೇಳೆ ಆರೋಪಿ ಅವರ ಬ್ಯಾಗ್‌ನಲ್ಲಿದ್ದ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾನೆ. ಎಚ್ಚರಗೊಂಡ ಬಳಿಕ ಚಿನ್ನಾಭರಣ ಕಳವಾಗಿರುವುದು ಗೊತ್ತಾಗಿ, ಮಗನಿಗೆ ಮಾಹಿತಿ ನೀಡಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Share News

About BigTv News

Check Also

ಮಾಲೂರು: ದಾರಿ ಬಿಡದ್ದಕ್ಕೆ ದಲಿತ ಯುವಕನ ಹತ್ಯೆ

ಕೋಲಾರ: ದೇವರಹಳ್ಳಿ ಗ್ರಾಮದಲ್ಲಿ ಜಮೀನಿನ ಮೂಲಕ ಕಲ್ಲು ಗಣಿಗಾರಿಕೆ ಸ್ಥಳಕ್ಕೆ ಹೋಗಲು ದಾರಿ ಬಿಡದ ವಿಚಾರಕ್ಕೆ ನಡೆದ ಜಗಳದಲ್ಲಿ ಪರಿಶಿಷ್ಟ …

Leave a Reply

Your email address will not be published. Required fields are marked *