ಮೊರಾದಾಬಾದ್(ಉತ್ತರ ಪ್ರದೇಶ): ಅಂತರ್ಧರ್ಮೀಯ ಪ್ರೇಮಿಗಳಿಬ್ಬರನ್ನು ಯುವತಿಯ ಸಹೋದರರೇ ಮಾರ್ಯಾದಾ ಹತ್ಯೆಗೈದಿರುವ ಘಟನೆ ಬೆಳಕಿಗೆ ಬಂದಿದೆ. ಹತ್ಯೆಗೀಡಾದವರು 19 ವರ್ಷದ ಕಾಜಲ್ ಮತ್ತು ಆಕೆಯ ಪ್ರೇಮಿ 27 ವರ್ಷದ ಅರ್ಮಾನ್ ಎಂದು ಗುರುತಿಸಲಾಗಿದೆ. ಇಬ್ಬರೂ ಮೊರಾದಾಬಾದ್‌ನ ಉಮ್ರಿ ಸಬ್ಜಿಪುರ ಗ್ರಾಮದ ನಿವಾಸಿಗಳಾಗಿದ್ದು, ಕಾಜಲ್ ಕಾಲೇಜು ವಿದ್ಯಾರ್ಥಿನಿಯಾಗಿದ್ದಳು. ಕಾಜಲ್ ಮತ್ತು ಅರ್ಮಾನ್ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದರು. ಇಬ್ಬರೂ ಹಿಂತಿರುಗದಿದ್ದಾಗ, ಅವರ ಕುಟುಂಬಗಳು ದೂರು ದಾಖಲಿಸಿದ್ದರು. ಹುಡುಕಾಟದ ವೇಳೆ ಹಳ್ಳಿಯಿಂದ ಕೆಲವು ಮೀಟರ್ ದೂರದ ದೇವಾಲಯದ ಹಿಂದಿರುವ ಅರಣ್ಯಪ್ರದೇಶದಲ್ಲಿ ಜೋಡಿ ಶವ ಪತ್ತೆಯಾಗಿದ್ದು, ಆಕೆಯ ಸಹೋದರರೇ ಮರ್ಯಾದೆ ಹತ್ಯೆ ಮಾಡಿದ್ದಾರೆ ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಕಾಜಲ್ ಳ ಮೂವರು ಸಹೋದರರ ವಿರುದ್ಧ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

