Breaking News

ಜಿಮ್‌ನಲ್ಲಿ ವ್ಯಕ್ತಿಯನ್ನು ಕೂಡಿಹಾಕಿ ಹಲ್ಲೆ: ದೂರು

ಕಾಪು: ಮಾತನಾಡುವ ನೆಪದಲ್ಲಿ ಸ್ನೇಹಿತನನ್ನು ಕಾರಿನಲ್ಲಿ ಕರೆದೊಯ್ದು ಮಣಿಪಾಲದ ಜಿಮ್‌ವೊಂದರ ಕೊಠಡಿಯಲ್ಲಿ ಕೂಡಿಹಾಕಿ ಹಲ್ಲೆ ನಡೆಸಿದ ಆರೋಪದಡಿ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಪು ಮಲ್ಲಾರು ನಿವಾಸಿ ಕೆ.ಎಸ್. ಮೊಹಮ್ಮದ್ ಹಮ್ರಾಝ್ (29) ಹಲ್ಲೆಗೊಳಗಾದವರು. ಅ.1ರಂದು ಇಲ್ಯಾಸ್ ಹಸನಬ್ಬ ಮನೆಗೆ ಬಂದು ಮಾತನಾಡುವುದಿದೆ ಎಂದು ಹೇಳಿ ಹಮ್ರಾಝ್ ಅವರನ್ನು ಕಾರಿನಲ್ಲಿ ಮಣಿಪಾಲದ ಜಿಮ್‌ಗೆ ಕರೆದೊಯ್ದಿದ್ದಾನೆ ಎನ್ನಲಾಗಿದೆ. ಕಾರಿನಲ್ಲಿ ಕುಳಿತುಕೊಳ್ಳುವ ವೇಳೆ ಮುಖಕ್ಕೆ ಹೊಡೆದು, ಬಳಿಕ ಜಿಮ್‌ನ ಕೊಠಡಿಯಲ್ಲಿ ಕೂಡಿ ಹಾಕಿ ಹಲವು ಬಾರಿ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ರಾತ್ರಿ ಜಿಮ್‌ನಿಂದ ಕೆಳಗೆ ಕರೆದುಕೊಂಡು ಬಂದು ಮತ್ತೆ ಹಲ್ಲೆ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Share News

About BigTv News

Check Also

ಬೆಂಗಳೂರಿನ ಶಿವಾಜಿನಗರದಲ್ಲಿ ಬೀಫ್ ಮಾರುಕಟ್ಟೆ ಬಯಲು: ಬಹಿರಂಗವಾಗಿ ಮಾಂಸ ಕತ್ತರಿಸಿ, ಬೇಯಿಸಿ ಮಾರಾಟ

ಬೆಂಗಳೂರು: ಶಿವಾಜಿನಗರದ ಬೀಫ್ ಮಾರುಕಟ್ಟೆಯ ವಿಡಿಯೋ ವೈರಲ್ ಬೆನ್ನಲ್ಲೇ ವಧೆ ಭೀತಿಯಲ್ಲಿದ್ದ ಗರ್ಭಿಣಿ ಹಸುವನ್ನು ಪೊಲೀಸರು ರಕ್ಷಿಸಿದ್ದಾರೆ. ಹಸುವನ್ನು ಶೀಘ್ರದಲ್ಲೇ …

Leave a Reply

Your email address will not be published. Required fields are marked *