Breaking News

ಬೆಂಗಳೂರಿನ ಶಿವಾಜಿನಗರದಲ್ಲಿ ಬೀಫ್ ಮಾರುಕಟ್ಟೆ ಬಯಲು: ಬಹಿರಂಗವಾಗಿ ಮಾಂಸ ಕತ್ತರಿಸಿ, ಬೇಯಿಸಿ ಮಾರಾಟ

ಬೆಂಗಳೂರು: ಶಿವಾಜಿನಗರದ ಬೀಫ್ ಮಾರುಕಟ್ಟೆಯ ವಿಡಿಯೋ ವೈರಲ್ ಬೆನ್ನಲ್ಲೇ ವಧೆ ಭೀತಿಯಲ್ಲಿದ್ದ ಗರ್ಭಿಣಿ ಹಸುವನ್ನು ಪೊಲೀಸರು ರಕ್ಷಿಸಿದ್ದಾರೆ. ಹಸುವನ್ನು ಶೀಘ್ರದಲ್ಲೇ ಕತ್ತರಿಸಲಾಗುತ್ತದೆ ಎಂದು ಮಾರಾಟಗಾರರು ಹೇಳಿರುವ ದೃಶ್ಯ ವಿಡಿಯೋದಲ್ಲಿದೆ. ‘ಕ್ರಿಸ್ ಟ್ರಾವೆಲ್ಸ್’ ಎಂಬ ಕಂಟೆಂಟ್ ಕ್ರಿಯೇಟರ್ ಹಂಚಿಕೊಂಡ ವಿಡಿಯೋದಲ್ಲಿ ಮಾಂಸ ಮಾರಾಟ ಮತ್ತು ಅಡುಗೆ ಮಾಡುವ ದೃಶ್ಯಗಳು ಕಂಡುಬಂದಿವೆ. ಈ ಕುರಿತು ‘ಗೋ ಜ್ಞಾನ ಫೌಂಡೇಶನ್’ ಪೊಲೀಸರಿಗೆ ದೂರು ನೀಡಿ ಹಸುವಿನ ರಕ್ಷಣೆಗೆ ಮನವಿ ಮಾಡಿತ್ತು. ತಕ್ಷಣ ಕಾರ್ಯಾಚರಣೆ ನಡೆಸಿದ ಶಿವಾಜಿನಗರ ಪೊಲೀಸರು ಹಸುವನ್ನು ರಕ್ಷಿಸಿ ಹೆಚ್ಚಿನ ಆರೈಕೆಗಾಗಿ ಮಹದೇವಪುರ ಗೋಶಾಲೆಗೆ ಸ್ಥಳಾಂತರಿಸಿದ್ದಾರೆ. ಆದರೆ, ಆರೋಪಿತ ಮಾರುಕಟ್ಟೆಯ ವಿರುದ್ಧ ಕೈಗೊಂಡಿರುವ ಕಾನೂನು ಕ್ರಮದ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.

Share News

About BigTv News

Check Also

5 ಗ್ರಾಂ ಚಿನ್ನದ ಉಂಗುರಕ್ಕೆ ಸಂಸಾರ ಸರ್ವನಾಶ! ಕಳೆದೋದ ಉಂಗುರಕ್ಕಾಗಿ ಗಂಡ ಹೆಂಡತಿ ಬಲಿ!

ಬಾಗಲಕೋಟೆ: ಕಳೆದುಹೋದ ಚಿನ್ನದ ಉಂಗುರದ ವಿಚಾರವಾಗಿ ಗಂಡ-ಹೆಂಡತಿ ನಡುವೆ ನಡೆದ ಜಗಳ ದುರಂತ ಅಂತ್ಯ ಕಂಡಿದೆ. ಮುಧೋಳ ತಾಲೂಕಿನ ಕುಳಲಿ …

Leave a Reply

Your email address will not be published. Required fields are marked *