Breaking News

ಕೊಡಿಗೇಹಳ್ಳಿಯಲ್ಲಿ ಕಸದ ರಾಶಿಯಲ್ಲಿ ಮಹಿಳೆ ಮೃತದೇಹ ಪತ್ತೆ: ಜೇಬಿನಲ್ಲಿದ್ದ ಆಧಾರ್‌ ಕಾರ್ಡ್‌ನಿಂದ ಕೊಲೆ ರಹಸ್ಯ ಬಯಲು, ಆರೋಪಿ ಅರೆಸ್ಟ್!

ಬೆಂಗಳೂರು: ಕೊಡಿಗೇಹಳ್ಳಿ ಬಳಿ ಕಸದ ರಾಶಿಯಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಪತ್ತೆಯಾಗಿದ್ದ ಮಹಿಳೆಯ ಮೃತದೇಹದ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಮೃತ ಮಹಿಳೆಯನ್ನು ಜಕ್ಕೂರಿನ ಸುಜಾತ (34) ಎಂದು ಗುರುತಿಸಿದ್ದು, ಕೊಲೆ ಆರೋಪದ ಮೇಲೆ ಫಯಾಜ್ ಪಾಷಾ (24) ಎಂಬಾತನನ್ನು ಬಂಧಿಸಿದ್ದಾರೆ. ಸುಜಾತ ಹಾಗೂ ಫಯಾಜ್ ಒಟ್ಟಿಗೆ ವಾಸಿಸುತ್ತಿದ್ದರು. ಸುಜಾತ ಬೇರೊಬ್ಬ ಯುವಕನೊಂದಿಗೆ ಒಡನಾಟ ಹೊಂದಿದ್ದಾಳೆ ಎಂಬ ವಿಚಾರಕ್ಕೆ ಜುಲೈ 14ರಂದು ಜಗಳವಾಗಿ, ಫಯಾಜ್ ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಬಳಿಕ ಮೃತದೇಹವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಕಸದ ರಾಶಿಗೆ ಎಸೆದು ಪರಾರಿಯಾಗಿದ್ದ. ನವೆಂಬರ್ 6ರಂದು ಮೃತದೇಹ ಪತ್ತೆಯಾಗಿದ್ದು, ಆಧಾರ್ ಕಾರ್ಡ್ ಮತ್ತು ಸಿಸಿಟಿವಿ ಸುಳಿವಿನ ಆಧಾರದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Share News

About BigTv News

Check Also

5 ಗ್ರಾಂ ಚಿನ್ನದ ಉಂಗುರಕ್ಕೆ ಸಂಸಾರ ಸರ್ವನಾಶ! ಕಳೆದೋದ ಉಂಗುರಕ್ಕಾಗಿ ಗಂಡ ಹೆಂಡತಿ ಬಲಿ!

ಬಾಗಲಕೋಟೆ: ಕಳೆದುಹೋದ ಚಿನ್ನದ ಉಂಗುರದ ವಿಚಾರವಾಗಿ ಗಂಡ-ಹೆಂಡತಿ ನಡುವೆ ನಡೆದ ಜಗಳ ದುರಂತ ಅಂತ್ಯ ಕಂಡಿದೆ. ಮುಧೋಳ ತಾಲೂಕಿನ ಕುಳಲಿ …

Leave a Reply

Your email address will not be published. Required fields are marked *