ತುಮಕೂರು: ಮನೆ ಕೆಲಸಕ್ಕೆಂದು ಬಂದು ವೈದ್ಯರ ಕುಟುಂಬದ ವಿಶ್ವಾಸ ಗಳಿಸಿದ್ದ ಮಹಿಳೆಯೊಬ್ಬಳು 800 ಗ್ರಾಂಗೂ ಅಧಿಕ ಚಿನ್ನ ಹಾಗೂ ವಜ್ರದ ಆಭರಣ ಕದ್ದಿರುವ ಆರೋಪ ಕೇಳಿಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ನೇಹಾ (24) ಮತ್ತು ಸೌಮ್ಯ ಎಂಬ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಎರಡು ವರ್ಷಗಳ ಹಿಂದೆ ಆಶ್ರಯ ನೀಡಿದ್ದ ವೈದ್ಯ ದಂಪತಿಯ ಮನೆಯಲ್ಲಿ ಸ್ನೇಹಾ ಕೆಲಸ ಮಾಡುತ್ತಿದ್ದಳು. ಲಾಕರ್‌ಗಳ ಕೀಗಳನ್ನು ಕದ್ದು ಕಳೆದ ಆರೇಳು ತಿಂಗಳಿಂದ ಚಿನ್ನಾಭರಣ ಕಳವು ಮಾಡಿ ಸೌಮ್ಯ ಮೂಲಕ ಮಾರಾಟ ಮಾಡಿದ್ದಳು ಎನ್ನಲಾಗಿದೆ. ಕದ್ದ ಹಣದಲ್ಲಿ ಕಾರು, ಬೈಕ್, ಆಟೋ ಸೇರಿದಂತೆ ಹಲವು ವಸ್ತುಗಳನ್ನು ಖರೀದಿಸಿದ್ದಳು. ಕಳ್ಳತನ ಬಯಲಾಗುವ ಭೀತಿಯಿಂದ ವೈದ್ಯರ ತಾಯಿ ಮತ್ತು ಮಗುವಿಗೆ ವಿಷವಿಟ್ಟು ಕೊಲೆ ಮಾಡಿ, ಕಳ್ಳರ ಕೃತ್ಯವೆಂದು ಬಿಂಬಿಸಲು ಸಂಚು ರೂಪಿಸಿದ್ದಳು ಎಂಬ ಆರೋಪವೂ ಕೇಳಿಬಂದಿದೆ. ಪೊಲೀಸರು ಕಾರು, ಬೈಕ್‌ಗಳು, ಆಟೋ ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news
