Breaking News

ಹುಲಾ ಹೂಪ್ಸ್ನಲ್ಲಿ ವರ್ಲ್ಡ್ ರೆಕಾರ್ಡ್ ಮಾಡಿದ ವಾಣಿಜ್ಯ ನಗರದ ಕ್ಯೂಟ್ ಬೆಡಗಿ

ಹುಬ್ಬಳ್ಳಿ: ಸಾಧನೆಗೆ ವಯಸ್ಸಿನ ಮಿತಿಇಲ್ಲಾ. ಮನಸ್ಸಿದ್ದರೆ ಜೀವನದಲ್ಲಿ ಎನ್ನಾದರೂ ಸಾಧಿಸಬಹುದು ಎಂಬದಕ್ಕೆ ಈ ಪೋರಿಯೇ ಸಾಕ್ಷಿ.  ಈ ಪುಟ್ಟ ಬಾಲಕಿಯ ಹೆಸರು ಸಮೃದ್ಧಿ ಪಾಟೀಲ ಲಂಡನ್ ಸಿಟಿಯಲ್ಲಿ ಹಮ್ಮಿಕೊಂಡಿದ್ದ ಹುಲಾ ಹೂಪ್ಸ್ ಗೇಮ್‌ನಲ್ಲಿ ಕೇವಲ ಒಂದು ನಿಮಿಷದಲ್ಲಿ ಬರೊಬ್ಬರಿ 198 ಬಾರಿ ರೊಟೇಟ್ ಮಾಡಿ ವರ್ಲ್ಡ್ ರೆಕಾರ್ಡ್ ಮಾಡಿದ್ದಾಳೆ.ಹುಬ್ಬಳ್ಳಿಯ ಬನಶಂಕರಿ ಬಡವಾಣಿ ನಿವಾಸಿ ಸುಜಾತಾ ಪಾಟೀಲ ಅವರ ಮಗಳು. ಈ ಪುಟ್ಟ ಬಾಲಕಿಯ ಸಾಧನೆಗೆ ಭಾರತದ ಛಾತ್ರ ರತ್ನ ಪ್ರಶಸ್ತಿ ಕೂಡ ದೊರೆತಿದೆ. ಸಾಧನೆ ಮಾಡಿದ ಸಮೃದ್ಧಿ ಖುಷಿ ಹಂಚಿಕೊಂಡಿದ್ದಾಳೆ.ತಮ್ಮ ಮಗಳಿಗೆ ಉತ್ತಮ ಶಿಕ್ಷಣ ಜೊತೆಗೆ ಕ್ರೀಡೆ ಬಗ್ಗೆ ಒಲವು ಮೂಡಿಸಿದ್ದು ಹೆಮ್ಮೆಯ ಸಂಗತಿ. ಅಷ್ಟೇ ಅಲ್ಲೆ ಸಮೃದ್ಧಿ ಹಾಡು, ಡ್ಯಾನ್ಸ್, ಡ್ರಾಯಿಂಗ್, ಕ್ರಾಪ್ಟ್ ಹೀಗೆ ಮಲ್ಟಿ ಟ್ಯಾಲೆಂಟೆಡ್. ಮಗಳ ಸಾಧನೆಗೆ ತಾಯಿ ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ಸಮೃದ್ಧಿ ಸಾಧನೆಗೆ ಹಲವಾರು ಪ್ರಶಸ್ತಿಗಳು ದೊರೆತಿದ್ದು, ಇಂಟರ್ನ್ಯಾಷನಲ್ ನಲ್ಲಿ ಭಾಗವಹಿಸಿ ವರ್ಲ್ಡ್ ರೆಕಾರ್ಡ್ ಮಾಡಿದ ಹುಬ್ಬಳ್ಳಿಯ ಈ ಪೋರಿಗೆ, ಹಿರಿಯರು ಹಾಗೂ ಸ್ವಾಮೀಜಿಗಳಿಂದ ಸನ್ಮಾನ ಸಹ ಮಾಡಿದ್ದಾರೆ.
Share News

About BigTv News

Check Also

ಹುಬ್ಬಳ್ಳಿ–ಧಾರವಾಡದಲ್ಲಿ ಟ್ರಾಫಿಕ್ ಅರಾಜಕತೆ! ಅಪ್ರಾಪ್ತರ ಕೈಗೆ ಬೈಕ್, ರಸ್ತೆಯಲ್ಲಿ ಜೀವದ ಜೊತೆ ಚೆಲ್ಲಾಟ!

👆News Audio ಹೆಲ್ಮೆಟ್ ಇಲ್ಲ, ನಂಬರ್ ಪ್ಲೇಟ್ ಇಲ್ಲ… ಟ್ರಾಫಿಕ್ ಪೊಲೀಸರ ಕಣ್ಣೆದುರೇ ನಿಯಮಗಳ ಉಲ್ಲಂಘನೆ! ಸಾರ್ವಜನಿಕರ ಜೀವಕ್ಕೆ ಹೊಣೆ …

Leave a Reply

Your email address will not be published. Required fields are marked *