Breaking News

ಶಿಕ್ಷಕರ ಬೇಡಿಕೆಗಳ ಈಡೇರಿಕೆಗೆ ಆಗ್ರಹಸೆ

ಧಾರವಾಡ: ಶಿಕ್ಷಣ ಹಾಗೂ ಶಿಕ್ಷಕರ ಬೇಡಿಕೆಗಳ ಈಡೇರಿಕೆಗಾಗಿ ಸೆ.5 ರಿಂದ ಅ.5 ರವರೆಗೆ ಅಖಿಲ ಭಾರತ ಶಿಕ್ಷಕರ ಫೆಡರೇಷನ್ ವತಿಯಿಂದ ಭಾರತ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಫೆಡರೇಷನ್ ಕಾರ್ಯಾಧ್ಯಕ್ಷ ಬಸವರಾಜ ಗುರಿಕಾರ ತಿಳಿಸಿದರು.

ನಗರದ ಸರ್ಕಾರಿ ನೌಕರರ ಭವನಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು, ಹಳೆ ಪಿಂಚಣಿ ಜಾರಿಗೆಗೊಳಿಸಬೇಕು. ರಾಷ್ಟ್ರೀಯ ಏಕರೂಪ ವೇತನ ನೀಡಬೇಕು. ನೂತನ ಶಿಕ್ಷಣ ನೀತಿಯ ಲೋಪದೋಷಗಳನ್ನು ಸರಿಪಡಿಸಬೇಕು. ಅರೆಕಾಲಿಕ ಶಿಕ್ಷಕರನ್ನು ಕೈಬಿಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು.

4 ತಂಡಗಳಲ್ಲಿ ಯಾತ್ರೆಯನ್ನು ಆರಂಭ ಮಾಡಲಾಗುತ್ತಿದ್ದು, 1ನೇ ತಂಡ ಸೆ. 5 ರಂದು ಕನ್ಯಾಕುಮಾರಿಯಿಂದ ಕೇರಳ,ತಮಿಳನಾಡು, ತೆಲಂಗಾಣ, ಆಂದ್ರ ಪ್ರದೇಶ ಕರ್ನಾಟಕ, ಗೋವಾ,ಮಹಾರಾಷ್ಟ್ರ, ಉತ್ತರ ಪ್ರದೇಶ,ಹರಿಯಾಣ ಮೂಲಕ ಅ.5 ರಂದು ದೆಹಲಿ ತಲುಪಲಿದೆ. ಇನ್ನೂ 2ನೇ ತಂಡ ಆಸ್ಸಾಂದ ಗುಹಾಹಟಿಯಿಂದ ಪಶ್ಚಿಮ ಬಂಗಾಳ, ಓಡಿಸ್ಸಾ, ಜಾರ್ಖಂಡ್, ಬಿಹಾರದ ಮೂಲಕ ದೆಹಲಿಗೆ ಬರಲಿದೆ. 3ನೇ ತಂಡ ಗುಜರಾತ ಸೋಮನಾಥಪುರದಿಂದ ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ತಾನ ಮೂಲಕ ದೆಹಲಿಗೆ ಬರಲಿದ್ದು, 4ನೇ ತಂಡ ಪಂಜಾಬ್ ರಾಜ್ಯಂದಿಂದ ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಖಂಡ ಮೂಲಕ ದೆಹಲಿ ತಲುಪಲಿದೆ ಎಂದು ಹೇಳಿದರು.

Share News

About BigTv News

Check Also

10 ದಿನಗಳಲ್ಲಿ ನ್ಯಾಯ ಸಿಗದಿದ್ದರೆ ಸಲ್ಲೇಖನ ವ್ರತ! ಸರ್ಕಾರಕ್ಕೆ ಗುಣಧರನಂದಿ ಸ್ವಾಮೀಜಿಗಳ ಕೊನೆಯ ಎಚ್ಚರಿಕೆ…

ಜೈನ ನಿಗಮ ಮಂಡಳಿ ಸ್ಥಾಪನೆಗೆ ಆಗ್ರಹ: ಚಿಕ್ಕೋಡಿಯಿಂದ ಸುವರ್ಣಸೌಧದವರೆಗೆ ಪಾದಯಾತ್ರೆ ಘೋಷಣೆ! ಜೈನ ಸಮುದಾಯದ ಬೇಡಿಕೆ ಈಡೇರದಿದ್ದರೆ ಸಲ್ಲೇಖನ ವ್ರತದ …

Leave a Reply

Your email address will not be published. Required fields are marked *