Breaking News

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ

ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆಯ ವಾರ್ಡ್ ನಂ. ೪೮(೫೯) ರ ಪ್ರತಿ ಪ್ರದೇಶಗಳಲ್ಲಿ ಮೂಲ ಸೌಕರ್ಯ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿ ಮಾಡಿಕೊಡುವಂತೆ ಒತ್ತಾಯಿಸಿದರೂ ಯಾವುದೇ ಪ್ರಯೋಜನವಾಗಲ್ಲ ಎಂಬುದನ್ನು ಖಂಡಿಸಿ ವಾರ್ಡ್ ನ ಸದಸ್ಯರೂ ಹಾಗೂ ಕಾಂಗ್ರೆಸ್ ಪಕ್ಷದ ಮಹಿಳಾ ಧುರೀಣೆಯಾದ ಸುವರ್ಣಾ ಕಲ್ಲಕುಂಟಲಾ ಅವರ ನೇತೃತ್ವದಲ್ಲಿ ಹು-ಧಾ ಪಾಲಿಕೆ ಎದುರು ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಮಾತನಾಡಿದ ಸುವರ್ಣ ಅವರು ವಾರ್ಡ್ ನ ಅಭಿವೃದ್ಧಿಗೆ ಆಗ್ರಹಿಸಿ ಸ್ಥಳೀಯ ಕ್ಷೇತ್ರದ ಶಾಸಕರು, ವಿ.ಪ. ಸದಸ್ಯರು, ಸಂಸದರು ಸೇರಿದಂತೆ ಪಾಲಿಕೆ ಆಯುಕ್ತರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಕೂಡ ಯಾವುದೇ ಕಾಮಗಾರಿಗಳನ್ನು ಕೈಗತ್ತಿಗೊಳ್ಳದೇ ನಿರ್ಲಕ್ಷ್ಯ ತೋರುತ್ತಿರುವುದು ಅಸಮಾಧಾನ ಮೂಡಿಸಿದೇ ಎಂದ ಅವರು ನಮ್ಮ ವಾರ್ಡ್ ಅಭಿವೃದ್ಧಿಗೆ ಆದ್ಯತೆ ‌ನೀಡುವವರೆಗೂ ನಾವು ಹೋರಾಟ ಮಾಡುತ್ತೇವೆ ಎಂದು ಪಟ್ಟು ಹಿಡಿದರು.

ವಿದ್ಯಾನಗರ‌ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ ಮಾತನಾಡಿ, ಪಾಲಿಕೆ ಚುನಾವಣೆ ಜರುಗಿ ಜರುಗಿ ಸುಮಾರು ೭ ತಿಂಗಳು ಗತಿಸಿದರೂ ಇನ್ನೂ ಮೇಯರ್ ಹಾಗೂ ಉಪಮೇಯರ್ ಚುನಾವಣೆ ಜರುಗಿಲ್ಲ.ಅಲ್ಲದೇ ಆಯಾ ವಾರ್ಡಿನ ಸದಸ್ಯರು ಅಧಿಕಾರವಿಲ್ಲದೇ ಕಂಗಾಲಾಗಿದ್ದಾರೆ. ಹೀಗಾದರೇ ಹು-ಧಾ ವಾರ್ಡ್ ಗಳು ಅಭಿವೃದ್ಧಿಯಾಗುವುದಾದರೂ ಎಂದು? ಇದಕ್ಕೆಲ್ಲಾ ರಾಜ್ಯ ನೇರ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿವರ್ಷ ೨.೮೬ ಲಕ್ಷ ಗೂ ಹೆಚ್ಚು ತೆರೆಗೆ ಕಟ್ಟುತ್ತೇವೆ. ಆದರೇ ಈ ವಾರ್ಡ್ ಗಳಿಗೆ ಕೇವಲ ೧೦ ಕೋಟಿ ಅನುದಾನ ಬಿಡುಗಡೆಯಾದರೂ ಕೂಡಾ ತಾರತಮ್ಯ ಮಾಡುತ್ತಿದ್ದಾರೆ ಎಂದು ದೂರಿದರು. ಆಯಾ ವಾರ್ಡ್ ಗಳಲ್ಲಿ ಕಸ ವಿಲೇವಾರಿಯಾಗದೇ ಇರುವುದು, ಅವ್ಯವಸ್ಥೆಯ ರಸ್ತೆಗಳು, ಸೇರಿದಂತೆ ವಾರ್ಡ್ ಗಳಲ್ಲಿನ ಅವ್ಯವಸ್ಥೆಯು ತಾಂಡವಾಡುತ್ತಿದ್ದು, ಪಾಲಿಕೆ ಹಾಗೂ ಸರ್ಕಾರ ಮೂಲ ಸೌಕರ್ಯ ಒದಗಿಸುವಲ್ಲಿ ಹಾಗೂ ಅಭಿವೃದ್ಧಿಗೆ ಆದ್ಯತೆ ನೀಡುವಲ್ಲಿ ವಿಫಲವಾಗಿದೆ ದೂರಿದರು.

ಪ್ರತಿಭಟನೆ ಸಂದರ್ಭದಲ್ಲಿ ದಾಸಿ ಕಲಕುಂಟ್ಲಾ, ಗ್ಯಾಬ್ರಿಲ್ ಪಿಲ್ಲೆ, ಧಾರಾ ಯೇಸು, ಪ್ರಾಂಚೀಸ್, ದಾರಾ ಪ್ರಭುದಾಸ, ತುಕಾರಾಮ್, ಸಚಿನ್, ಜ್ಞಾನೇಶ್ವರ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.

Share News

About admin

Check Also

ಬೆಂಗಳೂರು | ಸಿಕ್ಕವರ ಮೇಲೆ ಮಚ್ಚು ಬೀಸಿದ ದುಷ್ಕರ್ಮಿಗಳು: ಎಂಟು ಮಂದಿಗೆ ಗಾಯ

ಬೆಂಗಳೂರು: ಮಾಸ್ಕ್ ಧರಿಸಿ ನಾಲ್ಕು ಬೈಕ್‌ಗಳಲ್ಲಿ ಬಂದಿದ್ದ ಎಂಟು ಮಂದಿ ದುಷ್ಕರ್ಮಿಗಳು ಉತ್ತರಹಳ್ಳಿ ಮುಖ್ಯರಸ್ತೆ ಹಾಗೂ ಅರಹಳ್ಳಿ ಗೇಟ್ ಬಳಿ …

Leave a Reply

Your email address will not be published. Required fields are marked *