Breaking News

ಪತ್ನಿ ಜೊತೆ ಜಾಲಿ ಮೂಡ್‌ ನಲ್ಲಿರುವ ನಿಖಿಲ್‌ ಕುಮಾರಸ್ವಾಮಿ!

ಸ್ಯಾಂಡಲ್‌ವುಡ್ ನಟ ನಿಖಿಲ್ ಕುಮಾರಸ್ವಾಮಿ ಅವರು ಸದ್ಯ ಜಾಲಿ ಮೂಡ್‌ಗೆ ಜಾರಿದ್ದಾರೆ. ಕೆಲದಿನಗಳಿಂದ ಫಾರಿನ್‌ನಲ್ಲಿ ನಿಖಿಲ್ ಫ್ಯಾಮಿಲಿ ಬೀಡು ಬಿಟ್ಟಿದ್ದಾರೆ. ಸದ್ಯ ಪತ್ನಿ ರೇವತಿ ಕೈ ಹಿಡಿದು ನಿಖಿಲ್ ಕುಮಾರಸ್ವಾಮಿ ಹೆಜ್ಜೆ ಹಾಕ್ತಿರೋದು ವೀಡಿಯೋವೊಂದನ್ನ ಜಾಗ್ವರ್ ಹೀರೋ ನಿಖಿಲ್ ಶೇರ್ ಮಾಡಿದ್ದಾರೆ.

ಮಾಜಿ ಸಿಎಂ ಕುಮಾರಸ್ವಾಮಿ ಕುಟುಂಬದ ಫ್ಯೂಚರ್ ನಿಖಿಲ್ ಕುಮಾರಸ್ವಾಮಿ ಅವರು ಸಿನಿಮಾ- ರಾಜಕೀಯ ಎರಡು ಕ್ಷೇತ್ರದಲ್ಲೂ ತಮ್ಮದೇ ಶೈಲಿಯಲ್ಲಿ ಗುರುತಿಸಿಕೊಂಡಿದ್ದಾರೆ. ಸದ್ಯ ಯುರೋಪ್‌ನಲ್ಲಿ ಹೊಸ ಹೊಸ ಜಾಗಗಳಿಗೆ ಭೇಟಿ ನೀಡುತ್ತಾ, ಚೆಂದದ ಫೋಟೋಗಳನ್ನ ಶೇರ್ ಮಾಡುತ್ತಾ ತಮ್ಮ ಬೆಂಬಲಿಗರಿಗೆ ಅಪ್‌ಡೇಟ್ ಕೊಡ್ತಿದ್ದಾರೆ. ಇದೀಗ ಹೊಸ ವೀಡಿಯೋ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

ವಿದೇಶದ ರಸ್ತೆ ಮೇಲೆ ಹೆಂಡತಿ ಕೈ ಹಿಡಿದು ನಿಖಿಲ್ ವಾಕಿಂಗ್ ಮಾಡ್ತಿರೋ ವಿಡಿಯೋವನ್ನ ನಿಖಿಲ್ ತನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

Share News

About BigTv News

Check Also

ಮೋದಿ ವಿರುದ್ಧ ಮಾತನಾಡಿದ್ರೆ ದೇಶ ದ್ರೋಹಿಗಳ ಪಟ್ಟ:ಸಂತೋಷ ಲಾಡ್ ಆಕ್ರೋಶ….

ಹುಬ್ಬಳ್ಳಿ: ಬಿಜೆಪಿ ಕೇಂದ್ರ ಸಚಿವರು ಪ್ರಪಂಚದ ಎಲ್ಲರ ಬಗ್ಗೆಯೂ ಮಾತನಾಡಬಹುದು. ನಾವು ಕೇಂದ್ರ ಸಚಿವರ ಬಗ್ಗೆ ಮೋದಿಯವರ ಬಗ್ಗೆ ಮಾತನಾಡಬಾರದು. …

Leave a Reply

Your email address will not be published. Required fields are marked *