Breaking News

ಹೆಚ್ಚು ಡಿಸಿಎಂಗಳ ನೇಮಕ ವಿಚಾರ ಹೈಕಮಾಂಡ್​ಗೆ ಬಿಟ್ಟಿದ್ದು: ಡಾ.ಜಿ.ಪರಮೇಶ್ವರ್.

ಬೆಂಗಳೂರು: ಹೆಚ್ಚು ಡಿಸಿಎಂಗಳ ನೇಮಕ ವಿಚಾರ ಹೈಕಮಾಂಡ್​ಗೆ ಬಿಟ್ಟಿದ್ದು, ಆ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು. ಸದಾಶಿವನಗರದಲ್ಲಿ ಇಂದು ಮಾತನಾಡಿದ ಅವರು, ನಾವು ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದರು.ಬಿಜೆಪಿ ನಾಯಕರ ರಿವರ್ಸ್ ಆಪರೇಷನ್ ವಿಚಾರವಾಗಿ ಪ್ರತಿಕ್ರಿಯಿಸಿ, ಎಲ್ಲವೂ ಗೊತ್ತಾಗುತ್ತದೆ, ಸ್ವಲ್ಪ ದಿನದಲ್ಲೇ ನೋಡಿ. ಯಾರ ಸಂಪರ್ಕದಲ್ಲಿ ಯಾರಿದ್ದಾರೆ ಅನ್ನೋದು ತಿಳಿಯಲಿದೆ ಎಂದು ಹೇಳಿದರು.

ವಿರೋಧ ಪಕ್ಷದ ನಾಯಕನ ನೇಮಕ ವಿಳಂಬ ವಿಚಾರವಾಗಿ, ಸಂವಿಧಾನಾತ್ಮಕವಾಗಿ ವಿಪಕ್ಷ ನಾಯಕ ಇರಬೇಕು. ಅವರ ಪಕ್ಷದ ಆಂತರಿಕ ವಿಚಾರ ಹೇಗಿದೆ ಅನ್ನೋದು ಗೊತ್ತಾಗ್ತಿದೆ. ಕರ್ನಾಟಕದ ಇತಿಹಾಸದಲ್ಲಿ ಎಂದೂ ಈ ರೀತಿ ಆಗಿರಲಿಲ್ಲ. ಈಗ ಬಿಜೆಪಿಯವರೂ ನಮ್ಮಂತೆ ಆಗಿದ್ದಾರೆ. ದೆಹಲಿ ಕಡೆ ನೋಡ್ತಿದ್ದಾರೆ. ಮೊದಲು ಹೈಕಮಾಂಡ್ ಕಡೆ ಎಲ್ಲದಕ್ಕೂ ಕಾಂಗ್ರೆಸ್‌ನವರು ನೋಡ್ತಾರೆ ಅಂತಿದ್ರು. ಈಗ ಬಿಜೆಪಿಯವರೂ ದೆಹಲಿ ಕಡೆ ನೋಡುವಂತಾಗಿದೆ ಎಂದು ಟೀಕಿಸಿದರು.

Share News

About BigTv News

Check Also

ಬೆತ್ತಲೆ ಕಾಮುಕನ ಅಟ್ಟಹಾಸ..! ಲೇಡೀಸ್ ಪಿಜಿಗಳೇ ಟಾರ್ಗೆಟ್..?

ಧಾರವಾಡದಲ್ಲಿ ಬೆತ್ತಲೆ ಕಾಮುಕನ ಅಟ್ಟಹಾಸ..! ಲೇಡೀಸ್ ಪಿಜಿಗಳೇ ಟಾರ್ಗೆಟ್…? 3 ತಿಂಗಳಿಂದ ಯುವತಿಯರಿಗೆ ಕಿರುಕುಳ ಆರೋಪ — ಸಿಸಿಟಿವಿಯಲ್ಲಿ ಬೆತ್ತಲೆ …

Leave a Reply

Your email address will not be published. Required fields are marked *