ಬಳ್ಳಾರಿ: ಮನೆಗೆರಡು ಮಕ್ಕಳು ಸಾಕು ಮನೆಗೆರೆಡು ಮರಗಳು ಬೇಕೆ ಬೇಕು” ವಾಕ್ಯ ಕಾಯ೯ರೂಪವಾದರೆ ಪಟ್ಟಣ ಮೃಂದಾವನ ಆಗಲಿದೆ ಎಂದು ಕೂಡ್ಲಿಗಿ ನೂತನ ಡಿವೈಎಸ್ಪಿ ಶಿವಕುಮಾರ ನುಡಿದರು.ಅವರು ಪಟ್ಟಣದಲ್ಲಿ ಮೈದಾನ ಗೆಳೆಯರ ಬಳಗ ಹಾಗೂ ಜೆಸಿಐ ಗೋಲ್ಡಾನ್.ಯುವ ಬ್ರಿಗೇಡ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಗಿಡ ನೆಡುವ ಕಾಯ೯ಕ್ರಮದಲ್ಲಿ ಸಹಭಾಗಿತ್ವ ವಹಿಸಿ ಗಿಡನೆಡೋ ಕಾಯ೯ಕ್ಕೆ ಚಾಲನೆ ನೀಡಿ ಮಾತನಾಡಿದರು.ಪಟ್ಟಣದಲ್ಲಿ ವಾಹನ ದಟ್ಟಣೆ ಹಾಗೂ ತ್ಯಾಜ್ಯ ಉತ್ಪನ್ನದಿಂದಾಗಿ ವಾತಾವರಣ ಮಲಿನವಾಗುತ್ತಿದ್ದು ಶುದ್ಧ ವಾತಾವರಣಕ್ಕಾಗಿ ಸುರ್ರಲೂ ನೈಮ೯ಲ್ಯತೆ ಕಾಪಾಡಿಕೊಳ್ಳಬೇಕು ಹಾಗೂ ಪ್ರತಿಯೊಂದು ಕುಟುಂಬವು ಮನೆಗೆರೆಡರಂತೆ ಗಿಡಗಳನ್ನು ನೆಟ್ಟು ಸಂಪೋಷಿಸಿದ್ದಲ್ಲಿ ಇಡೀ ಪಟ್ಟವೇ ಮೃಂದಾವನ ವಾಗಲಿದ್ದು ಧೈಹಿಕ ಮಾನಸಿಕ ಆರೋಗ್ಯ ಸಹಜವಾಗಿಯೇ ಸವ೯ರಿಗೂ ಲಭಿಸಲಿದೆ ಇದು ಪ್ರತಿಯೊಬ್ಬ ನಾಗರೀಕನ ಆಧ್ಯಕಥ೯ವ್ಯ ವಾಗಿದೆ ಎಂದರು.ಹಸಿರು ವಾತಾವರಣ ನಿಮಾ೯ಣಕ್ಕಾಗಿ ಯುವಕರು ಅವಿರತವಾಗಿ ಶ್ರಮಿಸುತ್ತಿದ್ದು.ಈಗಾಗಲೇ ಐನೂರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟಿದ್ದು ಅವುಗಳ ಪಾಲನೆ ಪೋಷಣೆಯನ್ನೂ ಮಾಡುತ್ತಿದ್ದಾರೆ ಮತ್ತು ಇನ್ನೂ ಸಾವಿರಾರು ಗಿಡಗಳನ್ನು ಪಟ್ಟಣದ ಅಗತ್ಯ ಸ್ಥಳಗಳಲ್ಲಿ ತಾವೇ ಗಿಡಗಳನ್ನು ನೆಡುವ ಮೂಲಕ ಸಂಪೋಷಿಸುವ ಮೂಲಕ ಕೂಡ್ಲಿಗಿ ಪಟ್ಟಣವನ್ನು ಹಸಿರೀಕರಣ ಮಾಡುವ ಮಹದಾಸೆಯನ್ನು ಹೊಂದಿ ಆದಿಸೆಯಲ್ಲಿ ಸತತ ಪರಿಶ್ರಮ ಪಡುತ್ತಿರುವುದು ಶ್ಲಾಘನೀಯವಾಗಿದೆ.ಮತ್ತು ಸಾವ೯ಜನಿಕರ ತುಥು೯ ಸಂದಭ೯ಗಳಲ್ಲಿ ಸಕ್ರೀಯವಾಗಿ ಭಾಗಿಯಾಗಿ ತಮ್ಮನ್ನ ಸಮಾಜ ಸೇವೆಗಾಗಿ ಮುಡುಪಾಗಿಸಿಕೊಂಡಿರುವ ಇವರೆಲ್ಲರೂ ಯುವಪೀಳಿಗೆಗೆ ಮಾದರಿ ಯಾಗಿದ್ದಾರೆ.ಇವರೊಂದಿಗೆ ನಾಗರೀಕರು.ಸಂಘ ಸಂಸ್ಥೆಗಳ ಪದಾಧಿಕಾರಿಗಳು.ಸ್ಥಳೀಯ ಜನಪ್ರತಿನಿಧಿಗಳು.ಸಂಬಂಧಿಸಿದ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂಧಿಗಳು ಅವರೊಂದಿಗೆ ಅಗತ್ಯರೀತಿಯಲ್ಲಿ ಸಹಕರಿಸಬೇಕೆಂದು ಡಿವೈಎಸ್ಪಿ ಶಿವಕುಮಾರ ಕರೆನೀಡಿದರು.ಈ ಸಂದಭ೯ದಲ್ಲಿ ಮೈದಾನ ಗೆಳೆಯರಬಳಗ,ಜೆಸಿಐ ಗೋಲ್ಡಾನ್,ಯುವಬ್ರಿಗೇಡ್ನ ಪದಾಧಿಕಾರಿಗಳು ಸವ೯ಸದಸ್ಯರು.ನಾಗರೀಕರು ಉಪಸ್ಥಿತರಿದ್ದರು.ವರದಿ: ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428
bigtvnews | Hubli Dharwad News | Kannada News | Karnataka News Hubli News | News In Hubli | Local news





