Breaking News

ಸಿದ್ದಕಟ್ಟೆಯಲ್ಲಿ ಯುವಕನಿಗೆ ಚೂರಿ ಇರಿತ ಪ್ರಕರಣ : ಒರ್ವನ ಬಂಧನ

ಬಂಟ್ವಾಳ: ಸಿದ್ದಕಟ್ಟೆ ಜಂಕ್ಷನ್‌ನಲ್ಲಿ ಯುವಕನಿಗೆ ಚೂರಿಯಿಂದ ಇರಿದು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಅಕ್ಟೋಬರ್ 18ರ ರಾತ್ರಿ ಸಂಗಬೆಟ್ಟು ನಿವಾಸಿ ಪ್ರಕಾಶ್ ಸ್ನೇಹಿತರೊಂದಿಗೆ ನಿಂತಿದ್ದ ವೇಳೆ ಆರು ಮಂದಿ ಆರೋಪಿಗಳು ಏಕಾಏಕಿ ಹಲ್ಲೆ ನಡೆಸಿದ್ದಾರೆ. ಈ ವೇಳೆ ಅಕ್ಷಿತ್ ಎಂಬಾತ ಚೂರಿಯಿಂದ ಹಲವು ಬಾರಿ ಇರಿದು ಗಾಯಗೊಳಿಸಿದ್ದಾನೆ ಎಂದು ಆರೋಪಿಸಲಾಗಿದೆ. ಗಾಯಾಳುವಿನ ಸಹೋದರ ಗಣೇಶ್ ನೀಡಿದ ದೂರಿನ ಮೇರೆಗೆ ಕಿರಣ್ ಕೆ. (28) ಎಂಬಾತನನ್ನು ಬಂಧಿಸಲಾಗಿದೆ. ಘಟನೆ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್‌ನ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ವಕೀಲನ ಹಣೆಗೆ ಗುಂಡಿಕ್ಕಿ ಕೊಂದ ಇಬ್ಬರು ಡೆಲಿವರಿ ಬಾಯ್‌ಗಳು

ಬೆಂಗಳೂರು: ಬಾಡಿಗೆ ಹಣದ ವಿಚಾರವಾಗಿ ಮನೆ ಮಾಲಿಕರಾಗಿದ್ದ ವಕೀಲ ಮಂಜುನಾಥ್ (42) ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ವೈಟ್‌ಫೀಲ್ಡ್‌ನ …

Leave a Reply

Your email address will not be published. Required fields are marked *