Breaking News

ಪ್ರಿಯಕರನಿಗೆ ಫೋಟೋ ಕಳುಹಿಸಿದ್ದೇ ತಪ್ಪಾಯ್ತಾ? ಖಾಸಗಿ PHOTOS ಅಶ್ಲೀಲ ಸೈಟ್ ನಲ್ಲಿ ಪ್ರತ್ಯಕ್ಷ!

ಬೆಂಗಳೂರು: ಪ್ರಿಯಕರನಿಗೆ ಸ್ನ್ಯಾಪ್‌ಚಾಟ್ ಮೂಲಕ ಕಳುಹಿಸಿದ್ದ ಖಾಸಗಿ ಫೋಟೋ ಹಾಗೂ ವೀಡಿಯೊಗಳು ಅಶ್ಲೀಲ ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡಿದ್ದು, 28 ವರ್ಷದ ಟೆಕ್ಕಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಇಂದಿರಾನಗರ ನಿವಾಸಿಯಾದ ಯುವತಿ, ಪ್ರಿಯಕರನ ಕೋರಿಕೆಯಂತೆ ಖಾಸಗಿ ದೃಶ್ಯಗಳನ್ನು ಕಳುಹಿಸಿದ್ದರು. ಬಳಿಕ ಅವು ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವುದು ಗಮನಕ್ಕೆ ಬಂದಿದ್ದು, ಸ್ನ್ಯಾಪ್‌ಚಾಟ್ ಖಾತೆ ಹ್ಯಾಕ್ ಆಗಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಪೂರ್ವ ವಿಭಾಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿರುವ ಯುವತಿ, ಖಾಸಗಿ ದೃಶ್ಯಗಳನ್ನು ತೆಗೆದುಹಾಕಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ.

Share News

About BigTv News

Check Also

ಪ್ರಿಯತಮನನ್ನು ಗಲ್ಲಿಗೇರಿಸಿ’ ಡೆತ್‌ನೋಟ್ ಬರೆದಿಟ್ಟು ಹಬ್ಬದ ದಿನವೇ ಪ್ರಾಣ ಬಿಟ್ಟ ಶಿಕ್ಷಕಿ

ಕೊಪ್ಪಳ: ಮದುವೆಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿ ಖಾಸಗಿ ಶಾಲಾ ಶಿಕ್ಷಕಿ ಸಂಗೀತ ಮೇಟಿ ತುಂಗಭದ್ರಾ ಜಲಾಶಯದ ಹಿನ್ನೀರಿಗೆ ಜಿಗಿದು ಆತ್ಮಹತ್ಯೆ …

Leave a Reply

Your email address will not be published. Required fields are marked *