Breaking News

ಮುಧೋಳದಲ್ಲಿ ದಸರಾ ಸಂಭ್ರಮಾಚರಣೆ ದುರಂತದಲ್ಲಿ ಅಂತ್ಯ: 25 ವರ್ಷದ ಯುವಕನ ಹತ್ಯೆ, ಚಿಕ್ಕಪ್ಪನಿಗೆ ಗಾಯ

ಬಾಗಲಕೋಟೆ: ಮುಧೋಳದ ವಿನಾಯಕ ನಗರದಲ್ಲಿ ದಸರಾ ದಂಡಿಯಾ ಕಾರ್ಯಕ್ರಮದ ವೇಳೆ ನಡೆದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದ್ದು, ನಿತಿನ್ ನಿಂಬಾಳ್ಕರ್ (25) ಮೃತಪಟ್ಟಿದ್ದಾರೆ. ಕಾರ್ಯಕ್ರಮದಲ್ಲಿ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದನ್ನು ಪ್ರಶ್ನಿಸಿದ ವಿಚಾರಕ್ಕೆ ನಿತಿನ್ ಹಾಗೂ ಶ್ರೀನಿವಾಸ್ ಕಡರಿ ನಡುವೆ ಜಗಳ ನಡೆದಿದೆ. ಬಳಿಕ ಸ್ನೇಹಿತರೊಂದಿಗೆ ಮರಳಿದ ಶ್ರೀನಿವಾಸ್, ನಿತಿನ್‌ಗೆ ಚಾಕುವಿನಿಂದ ಇರಿದಿರುವ ಆರೋಪ ಕೇಳಿಬಂದಿದೆ. ಜಗಳ ತಡೆಯಲು ಬಂದ ನಿತಿನ್ ಚಿಕ್ಕಪ್ಪ ಸಂಜಯ್ ನಿಂಬಾಳ್ಕರ್ ಕೂಡ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಧೋಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹಳೆಯ ದ್ವೇಷ ಸೇರಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

Share News

About BigTv News

Check Also

ಪ್ರಿಯತಮನನ್ನು ಗಲ್ಲಿಗೇರಿಸಿ’ ಡೆತ್‌ನೋಟ್ ಬರೆದಿಟ್ಟು ಹಬ್ಬದ ದಿನವೇ ಪ್ರಾಣ ಬಿಟ್ಟ ಶಿಕ್ಷಕಿ

ಕೊಪ್ಪಳ: ಮದುವೆಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿ ಖಾಸಗಿ ಶಾಲಾ ಶಿಕ್ಷಕಿ ಸಂಗೀತ ಮೇಟಿ ತುಂಗಭದ್ರಾ ಜಲಾಶಯದ ಹಿನ್ನೀರಿಗೆ ಜಿಗಿದು ಆತ್ಮಹತ್ಯೆ …

Leave a Reply

Your email address will not be published. Required fields are marked *