Breaking News

ಆನೇಕಲ್| ಕಾಸಿಗಾಗಿ ಕೊಲೆ: ಯುವಕ ಬಂಧನ

ಆನೇಕಲ್: ದಸರಾ ನೋಡಲು ಬಂದಿದ್ದ ಯಲ್ಲಪ್ಪ ಅವರನ್ನು ಹಣಕ್ಕಾಗಿ ಕೊಲೆ ಮಾಡಿದ ಪ್ರಕರಣವನ್ನು ಭೇದಿಸಿರುವ ಪೊಲೀಸರು, ಆರೋಪಿ ಸಾಗರ್‌ (19) ಎಂಬಾತನನ್ನು ಬಂಧಿಸಿದ್ದಾರೆ. ಚಿಕ್ಕಕೆರೆ ಮೈದಾನದಲ್ಲಿ ಮದ್ಯ ಸೇವಿಸುತ್ತಿದ್ದ ಯಲ್ಲಪ್ಪ ಅವರ ಜೇಬಿನಲ್ಲಿದ್ದ ಹಣ ಕಿತ್ತುಕೊಳ್ಳಲು ಆರೋಪಿ ಹಾಗೂ ಸ್ನೇಹಿತರು ಯತ್ನಿಸಿದ್ದಾರೆ. ಈ ವೇಳೆ ಪ್ರತಿರೋಧ ತೋರಿದ ಯಲ್ಲಪ್ಪ ಅವರ ತಲೆಗೆ ಸಾಗರ್ ಮರದ ಹಲಗೆಯಿಂದ ಹೊಡೆದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆ ಬಳಿಕ ಮೃತರ ಮೊಬೈಲ್‌ನಿಂದಲೇ 112ಕ್ಕೆ ಕರೆ ಮಾಡಿ ಏನೂ ತಿಳಿಯದಂತೆ ನಾಟಕವಾಡಿದ್ದ ಆರೋಪಿ, ಬಳಿಕ ಪರಾರಿಯಾಗಿದ್ದನು. ಮೊಬೈಲ್ ನೆಟ್‌ವರ್ಕ್ ಆಧರಿಸಿ ಓಮಿನಿ ಕಾರಿನಲ್ಲಿ ಮಲಗಿದ್ದ ಸಾಗರ್‌ನನ್ನು ಪೊಲೀಸರು ಬಂಧಿಸಿದ್ದು, ಮತ್ತೊಬ್ಬ ಆರೋಪಿಗಾಗಿ ಶೋಧ ಮುಂದುವರೆಸಿದ್ದಾರೆ.

Share News

About BigTv News

Check Also

ಯುವಕರ ಮೇಲೆ ಗುಂಪಿನಿಂದ ಹಲ್ಲೆ, ದೃಶ್ಯ ಮೊಬೈಲ್ ನಲ್ಲಿ ಸೆರೆ, ಯುವತಿ ವಿಚಾರದಲ್ಲಿ ಹಲ್ಲೆ ಆರೋಪ!

ಮೈಸೂರು: ನಗರದ ಮಾನಸ ಗಂಗೋತ್ರಿ ಬಳಿಯ ಖಾಸಗಿ ಕಾಲೇಜಿನಲ್ಲಿ ಯುವತಿ ವಿಚಾರಕ್ಕೆ ಯುವಕನ ಮೇಲೆ ಗುಂಪೊಂದು ಹಿಗ್ಗಾಮುಗ್ಗ ಹಲ್ಲೆ ನಡೆಸಿದ …

Leave a Reply

Your email address will not be published. Required fields are marked *