ಹುಬ್ಬಳ್ಳಿ : ಜನರಲ್ಲಿ ರಕ್ಷಣೆ ಮನೋಭಾವದ ಜೊತೆಗೆ ಹೆಚ್ಚುತ್ತಿರುವ ರಸ್ತೆ ಅಪಘಾತ ಪ್ರಕರಣಗಳಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಹುಬ್ಬಳ್ಳಿಯ ಕೇಶ್ವಾಪುರ ಠಾಣೆಯ ಪೊಲೀಸರು ಬೈಕ್ ಬ್ಯಾಲಿ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ .

ಹುಬ್ಬಳ್ಳಿ- ಧಾರವಾಡ ಪೊಲೀಸ್ ಆಯುಕ್ತ ಲಾಬೂರಾಮ್ ಮಾರ್ಗದರ್ಶನದಲ್ಲಿ ಇಂದು ಕೇಶ್ವಾಪುರ ಠಾಣೆಯಿಂದ ಬೈಕ್ ರಾಲಿ ಮೂಲಕ ಕೇಶ್ವಾಪುರ , ಮಧುರಾ ಕಾಲೋನಿ , ನೆಹರೂನಗರ , ಶಾಂತಿನಗರ , ಗೊಪ್ಪನಕೊಪ್ಪ , ಬೆಂಗೇರಿ , ರಾಮನಗರ ಮಾರ್ಗವಾಗಿ ಸರ್ವೋದಯ ಸರ್ಕಲ್ ಬಳಿ ಕ್ಯಾಲಿ ಅಂತ್ಯಗೊಂಡಿತು . ಪೊಲೀಸರು ಬ್ಯಾಲಿಯುದ್ದಕ್ಕೂ ಸಂಚಾರಿ ನಿಯಮಗಳ ಕುರಿತು ಜನರಿಗೆ ಮಾಹಿತಿ ನೀಡಿ ಜಾಗೃತಿ ಮೂಡಿಸಿದರು.

bigtvnews | Hubli Dharwad News | Kannada News | Karnataka News Hubli News | News In Hubli | Local news

