ಬೆಂಗಳೂರು: ಮೂರನೇ ಮದುವೆಯಾಗಲು ವಿಚ್ಛೇದನ ನೀಡುವಂತೆ ಪತ್ನಿಗೆ ಪಿಸ್ತೂಲ್ ತೋರಿಸಿ ಹಲ್ಲೆ ನಡೆಸಿ ಕಿರುಕುಳ ನೀಡಿರುವ ಆರೋಪ ಪತಿಯ ವಿರುದ್ಧ ಕೇಳಿಬಂದಿದೆ. ಈ ಘಟನೆ ಸುದ್ದುಗುಂಟೆಪಾಳ್ಯದ ಬಿಸ್ಮಿಲ್ಲಾ ನಗರದಲ್ಲಿ ನಡೆದಿದೆ. 2017ರಲ್ಲಿ ಝಾರ ಅಮೀನಾ ಮತ್ತು ಮುಹೀಜ್ ಅಹ್ಮದ್ ವಿವಾಹವಾಗಿದ್ದು, ದಂಪತಿಗೆ ಮಕ್ಕಳಿದ್ದಾರೆ. ಕಳೆದ ಒಂದು ವರ್ಷದಿಂದ ಪತಿ ಅನುಮಾನಪಟ್ಟು ಹಲ್ಲೆ ನಡೆಸುತ್ತಿದ್ದು, ತನ್ನ ವೈರಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರದ ದೂರು ನೀಡುವಂತೆ ಒತ್ತಡ ಹಾಕಿದ್ದಾನೆ. ಮಕ್ಕಳನ್ನು ಕೊಲ್ಲುವುದಾಗಿಯೂ ಬೆದರಿಕೆ ಹಾಕಿದ್ದಾನೆ ಎಂದು ಪತ್ನಿ ಆರೋಪಿಸಿದ್ದಾರೆ. ಈ ಸಂಬಂಧ ಈಗಾಗಲೇ ಸುದ್ದುಗುಂಟೆಪಾಳ್ಯ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪೊಲೀಸ್ ವಿಚಾರಣೆ ಬಳಿಕವೂ ಪತಿ ಹಾಗೂ ಆತನ ಪ್ರೇಯಸಿಯಿಂದ ಕಿರುಕುಳ ಮುಂದುವರಿದಿದ್ದು, ಪತ್ನಿಯನ್ನು ಕೊಠಡಿಯಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

