Breaking News

ಕೊಲೆಯಾಗಿದ್ದಾಳೆ ಎನ್ನಲಾದ ಮಹಿಳೆ ದಿಢೀರ್ ಪ್ರತ್ಯಕ್ಷ; ಮಾಡದ ತಪ್ಪಿಗೆ 2.5 ವರ್ಷ ಜೈಲಿನಲ್ಲಿದ್ದ ವ್ಯಕ್ತಿ!

ಮಂಡ್ಯ: 2019ರಲ್ಲಿ ನಾಪತ್ತೆಯಾಗಿದ್ದ ಮಂಜು ಎಂಬ ಮಹಿಳೆಯ ಕೊಲೆ ಆರೋಪದ ಮೇಲೆ ರಾಜೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಆದರೆ ಯಾವುದೇ ಕೊಲೆ ಮಾಡದ ರಾಜೇಶ್ ಸುಮಾರು ಎರಡೂವರೆ ವರ್ಷ ಜೈಲಿನಲ್ಲಿ ಕಳೆದಿದ್ದು, 2024ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಪೊಲೀಸರು ಚಿತ್ರಹಿಂಸೆ ನೀಡಿ ಬಲವಂತವಾಗಿ ತಪ್ಪೊಪ್ಪಿಗೆ ಹೇಳಿಕೆ ಪಡೆದಿದ್ದಾರೆ ಎಂಬ ಆರೋಪವೂ ಕೇಳಿಬಂದಿತ್ತು. ಇದೀಗ ನಾಗಮಂಗಲದಲ್ಲಿ ಮಂಜು ಜೀವಂತವಾಗಿ ಪತ್ತೆಯಾಗಿದ್ದಾರೆ. ಇಷ್ಟವಿಲ್ಲದ ಮದುವೆಯಿಂದ ಮನೆ ಬಿಟ್ಟು ಹೋಗಿ ಮತ್ತೊಬ್ಬರನ್ನು ಮದುವೆಯಾಗಿದ್ದೇನೆ. ರಾಜೇಶ್ ಪರಿಚಯವೇ ಇಲ್ಲ ಎಂದು ಮಂಜು ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಪೊಲೀಸ್ ತನಿಖೆಯ ಲೋಪದ ಬಗ್ಗೆ ಇದೀಗ ಹಲವು ಪ್ರಶ್ನೆಗಳು ಎದ್ದಿವೆ.

Share News

About BigTv News

Check Also

ಮಕ್ಕಳಾಗಿಲ್ಲ ಅಂತ ಚೇಡಿಸುತ್ತಿದ್ದ ಗಂಡನನ್ನೇ ಚುಚ್ಚಿ ಕೊಂದ ಪತ್ನಿ!

ಬೆಂಗಳೂರು: ಮಕ್ಕಳಾಗಿಲ್ಲ ಎಂಬ ವಿಚಾರಕ್ಕೆ ಪತಿ ಮದ್ಯದ ನಶೆಯಲ್ಲಿ ಪ್ರತಿದಿನ ಕಿರುಕುಳ ನೀಡುತ್ತಿದ್ದರಿಂದ ಬೇಸತ್ತ ಪತ್ನಿಯೊಬ್ಬಳು, ಪತಿಯನ್ನು ಚಾಕುವಿನಿಂದ ಇರಿದು …

Leave a Reply

Your email address will not be published. Required fields are marked *