ಬಾಗಲಕೋಟೆ: ಬೀಳಗಿ ತಾಲೂಕಿನ ಗಿರಿಸಾಗರ ಗ್ರಾಮದ ಯುವಕ ವಿಕಾಸ್ ದಳವಾಯಿ (18) ನಾಪತ್ತೆ ಪ್ರಕರಣ ಭೀಕರ ಕೊಲೆಯಲ್ಲಿ ಅಂತ್ಯಗೊಂಡಿದೆ. ತಾನು ಪ್ರೀತಿಸುತ್ತಿದ್ದ ಯುವತಿ ಬೇರೆಯವರಿಗೆ ಸಿಗಬಾರದು ಎಂಬ ದ್ವೇಷದಿಂದ ಮತ್ತೊಬ್ಬ ಪ್ರೇಮಿ ಕೃಷ್ಣಾ, ಯುವತಿಯ ಸಹೋದರ ರಾಜುನನ್ನು ಪ್ರಚೋದಿಸಿ ವಿಕಾಸ್‌ನ ಹತ್ಯೆ ಮಾಡಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಮೇ 20ರಂದು ಗ್ರಾಮದ ಜಾತ್ರೆಯ ನಾಟಕ ವೀಕ್ಷಿಸಲು ಹೋದ ವಿಕಾಸ್ ಮನೆಗೆ ಮರಳಿರಲಿಲ್ಲ. ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದ ಬೀಳಗಿ ಪೊಲೀಸರು, ಪ್ರೇಮ ತ್ರಿಕೋನವೇ ಕೊಲೆಗೆ ಕಾರಣ ಎಂದು ಪತ್ತೆಹಚ್ಚಿದ್ದಾರೆ. ಆರೋಪಿಗಳು ವಿಕಾಸ್‌ನನ್ನು ಉಸಿರುಗಟ್ಟಿಸಿ ಕೊಂದು, ಶವವನ್ನು ಗೋಣಿ ಚೀಲದಲ್ಲಿ ಕಲ್ಲುಗಳೊಂದಿಗೆ ತುಂಬಿ ಘಟಪ್ರಭಾ ನದಿಗೆ ಎಸೆದಿದ್ದರು ಎನ್ನಲಾಗಿದೆ. ಪ್ರಕರಣದ ಬಳಿಕ ಆರೋಪಿಗಳಾದ ಕೃಷ್ಣಾ ಮತ್ತು ರಾಜು ತಲೆಮರೆಸಿಕೊಂಡಿದ್ದು, ರಾಜುನ ಸಹೋದರ ರವಿಯನ್ನು ವಿಚಾರಣೆ ನಡೆಸಿದಾಗ ಸತ್ಯ ಬಹಿರಂಗವಾಗಿದೆ. ಬಳಿಕ ಪೊಲೀಸರು ನದಿಯಿಂದ ವಿಕಾಸ್ ಮೃತದೇಹವನ್ನು ಹೊರತೆಗೆದಿದ್ದು, ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯ ಮುಂದುವರಿದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

