Breaking News

ಒಂದು ಕಾಲ್ ಮಾಡಬೇಕಿತ್ತು, ಪೋನ್ ಕೊಡ್ತೀರಾ ಅಂತ ಯಾರಾದ್ರೂ ಕೇಳಿದ್ರೆ ಎಚ್ಚರ!

ಮಂಡ್ಯ: ಅಪರಿಚಿತ ಮಹಿಳೆಗೆ ಮೊಬೈಲ್ ಕರೆ ಮಾಡಲು ಫೋನ್ ನೀಡಿದ್ದ ಯುವಕನೊಬ್ಬ ಕೊಲೆ ಆರೋಪ ಎದುರಿಸಿ ಎರಡೂವರೆ ವರ್ಷ ಜೈಲು ಶಿಕ್ಷೆ ಅನುಭವಿಸಿದ ಘಟನೆ ಪಾಂಡವಪುರದಲ್ಲಿ ನಡೆದಿದೆ. 2019ರಲ್ಲಿ ನಾಪತ್ತೆಯಾಗಿದ್ದ ಮಂಜು ಪ್ರಕರಣದಲ್ಲಿ ರಾಜೇಶ್ ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದರು. ಮಹಿಳೆಗೆ ಕೊನೆಯದಾಗಿ ಕರೆ ಮಾಡಲು ಫೋನ್ ನೀಡಿದ್ದ ರಾಜೇಶ್‌ನನ್ನೇ ಕೊಲೆ ಆರೋಪಿ ಎಂದು ಬಂಧಿಸಲಾಗಿತ್ತು. ಆದರೆ ಇದೀಗ ಏಳು ವರ್ಷಗಳ ಬಳಿಕ ಮಂಜು ನಾಗಮಂಗಲದಲ್ಲಿ ಜೀವಂತವಾಗಿ ಪತ್ತೆಯಾಗಿದ್ದು, ತಾನೇ ಮನೆ ಬಿಟ್ಟು ಹೋಗಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ತನಿಖಾ ಲೋಪದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಮಂಡ್ಯ ಎಸ್‌ಪಿ ಡಾ. ವಿ.ಜೆ. ಶೋಭರಾಣಿ ಡಿವೈಎಸ್ಪಿ ನೇತೃತ್ವದಲ್ಲಿ ಸಮಗ್ರ ತನಿಖೆಗೆ ಆದೇಶಿಸಿದ್ದಾರೆ. ಮಾಡದ ತಪ್ಪಿಗೆ ಜೈಲು ಅನುಭವಿಸಿದ ರಾಜೇಶ್‌ಗೆ ಕೊನೆಗೂ ಸತ್ಯದ ಅರಿವು ನ್ಯಾಯ ದೊರಕಿಸಿಕೊಟ್ಟಿದೆ.

Share News

About BigTv News

Check Also

ಬಾಳೆಗೊನೆಯಲ್ಲಿ ಡ್ರಗ್ ಸಾಗಾಟ: ಪ್ರಗತಿಪರ ಯುವ ರೈತನ ಕರಾಳ ಮುಖ ಬಯಲು

ಮೈಸೂರು: ಕೇರಳದಲ್ಲಿ ಪ್ರಗತಿಪರ ಯುವ ರೈತ ಪ್ರಶಸ್ತಿ ಪಡೆದಿದ್ದ 31 ವರ್ಷದ ಧನೇಶ್ ಎಸ್. ನಾಯರ್ ಅಲಿಯಾಸ್ ಡ್ಯಾನಿ, ಮೈಸೂರಿನ …

Leave a Reply

Your email address will not be published. Required fields are marked *