Breaking News

ಬಳ್ಳಾರಿಯಲ್ಲಿ ₹350 ಕೋಟಿ ಜಿಎಸ್‌ಟಿ ವಂಚನೆ: ದಂಗಾದ ಸೈಬರ್ ಕ್ರೈಂ ಪೊಲೀಸರು!

ಬಳ್ಳಾರಿಯಲ್ಲಿ ಬೃಹತ್ ಜಿಎಸ್‌ಟಿ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ತಿಂಗಳಿಗೆ ಕೇವಲ ₹15 ಸಾವಿರ ಸಂಬಳ ಪಡೆಯುವ ಶೋರೂಂ ಉದ್ಯೋಗಿ ರೋಷನ್ ಎಂಬುವವರ ಹೆಸರಿನಲ್ಲಿ ಐದೇ ತಿಂಗಳಲ್ಲಿ ₹350 ಕೋಟಿ ಜಿಎಸ್‌ಟಿ ವ್ಯವಹಾರ ನಡೆದಿರುವುದು ಪತ್ತೆಯಾಗಿದೆ. ರೋಷನ್ ಅವರ ಆಧಾರ್, ಪಾನ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಹಾಗೂ ವಿದ್ಯುತ್ ಬಿಲ್ ದಾಖಲೆಗಳನ್ನು ದುರುಪಯೋಗಪಡಿಸಿಕೊಂಡು ‘ರೋಷನ್ ಎಂಟರ್‌ಪ್ರೈಸಸ್’ ಹೆಸರಿನಲ್ಲಿ ಜಿಎಸ್‌ಟಿ ನೋಂದಣಿ ಮಾಡಲಾಗಿತ್ತು. ಪ್ಲಾಸ್ಟಿಕ್ ವ್ಯಾಪಾರದ ಹೆಸರಿನಲ್ಲಿ ವ್ಯವಹಾರ ನಡೆಸಿ ಬಳಿಕ ಬ್ಯಾಂಕ್ ಖಾತೆ ಮುಚ್ಚಲಾಗಿದೆ ಎನ್ನಲಾಗಿದೆ. ಜಿಎಸ್‌ಟಿ ಅಧಿಕಾರಿಗಳು ಮನೆಗೆ ಭೇಟಿ ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಆಘಾತಕ್ಕೊಳಗಾದ ರೋಷನ್ ಕುಟುಂಬ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದೆ. ದಾಖಲೆ ದುರುಪಯೋಗಪಡಿಸಿಕೊಂಡವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

Share News

About BigTv News

Check Also

ಅಕ್ರಮ ಮರಳು ಮಾಫಿಯಾಗೆ ಸಾಥ್ ನೀಡಿದ ಆರೋಪ; ಪಿಎಸ್‌ಐ, ಕಾನ್ಸ್​​​​​​​​​ಸ್ಟೆಬಲ್ ಸಸ್ಪೆಂಡ್

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ದೊಡ್ಡಕೆರೆ ಬರಿದಾಗುತ್ತಿದ್ದಂತೆ ಅಕ್ರಮ ಫಿಲ್ಟರ್ ಮರಳು ದಂಧೆ ಮತ್ತೆ ಆರಂಭವಾಗಿದೆ. ದಂಧೆ ನಿಯಂತ್ರಿಸುವಲ್ಲಿ …

Leave a Reply

Your email address will not be published. Required fields are marked *