ಉಡುಪಿ: ನನ್ನನ್ನು ಹುಡುಕಬೇಡಿ ಎಂದು ಪತ್ರಬರೆದಿಟ್ಟು ಕಳೆದ 10 ದಿನಗಳ ಹಿಂದೆ ನಾಪತ್ತೆಯಾಗಿದ್ದ ಪ್ರವೀಣ್ ಬೆಳ್ಚಾಡ ಎಂಬವರ ಮೃತದೇಹವು ಬ್ರಹ್ಮಾವರದ ಹಂದಾಡಿ ಕಂಬಳಗದ್ದೆಯ ಹೊಳೆ ಬದಿಯಲ್ಲಿ ಪತ್ತೆಯಾಗಿದೆ.
ಪ್ರವೀಣ್ ಅಕ್ಟೋಬರ್ 18ರಂದು ರಾತ್ರಿ ಸ್ಕೂಟರ್ ಸಮೇತ ಕಾಣೆಯಾಗಿದ್ದರು. ಮನೆಯಲ್ಲಿ ಪತ್ರ ಬರೆದಿಟ್ಟಿದ್ದ ಅವರು ನನ್ನನ್ನು ಹುಡುಕಬೇಡಿ , ನನ್ನ ಸಾವಿಗೆ ನಾನೇ ಕಾರಣ ಎಂದು ಅದರಲ್ಲಿ ಬರೆದಿದ್ದರು. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ದೂರ ದಾಖಲಾಗಿತ್ತು. ಕೆಲ ದಿನಗಳ ಹಿಂದೆ ಬ್ರಹ್ಮಾವರ ಸೇತುವೆಯ ಬಳಿ ಪ್ರವೀಣ್ ಸ್ಕೂಟರ್ ಪತ್ತೆಯಾಗಿತ್ತು. ಪ್ರವೀಣ್‌ಗಾಗಿ ಅಗ್ನಿಶಾಮಕ ದಳ, ಪೋಲೀಸರ ಸಹಕಾರದೊಂದಿಗೆ ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡ ನದಿಯಲ್ಲಿ ಶೋಧ ಕಾರ್ಯ ಆರಂಭಿಸಿತ್ತು. ಆದರೆ ಪ್ರವೀಣ್ ಮೃತದೇಹ ಪತ್ತೆಯಾಗಿರಲಿಲ್ಲ. ಗುರುವಾರ ಹಂದಾಡಿ ಕಂಬಳಗದ್ದೆಯ ಹೊಳೆ ಬದಿಯಲ್ಲಿ ಪ್ರವೀಣ್ ಮೃತದೇಹ ಪತ್ತೆಯಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

