ಬೆಂಗಳೂರು: ಅಡುಗೆ ಸರಿಯಾಗಿ ಮಾಡಿಲ್ಲ ಎಂದು ಪತಿ ಬೈದಿದ್ದಕ್ಕೆ ತೀವ್ರವಾಗಿ ನೊಂದ ಪತ್ನಿಯೊಬ್ಬಲು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ದೇವರಜೀವನಹಳ್ಳಿ ಶಾಂಪುರದಲ್ಲಿ ನಡೆದಿದೆ.
ಶಾಂಪುರ ನಿವಾಸಿ ಜಯಲಕ್ಷ್ಮೀ (41) ಆತ್ಮಹತ್ಯೆಗೆ ಶರಣಾದ ಮಹಿಳೆಯಲಾಗಿದ್ದಾರೆ. ಪತಿ ನಾಗರಾಜ್ ವಿರುದ್ಧ ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಜಯಲಕ್ಷ್ಮೀ ಹಾಗೂ ನಾಗರಾಜ್ ರಾಯಚೂರು ಮೂಲದವರಾಗಿದ್ದು, 2008ರಲ್ಲಿ ದಂಪತಿಗಳು ಬೆಂಗಳೂರಿಗೆ ಆಗಮಿಸಿದ್ದರು. ನಾಗರಾಜ್ ಹೆಗ್ಡೆ ನಗರದಲ್ಲಿ ಸಲೂನ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಕುಟುಂಬ ಶಾಂಪುರದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದು, ಜಯಲಕ್ಷ್ಮೀ ಗೃಹಿಣಿಯಾಗಿದ್ದರು.
ಬುಧವಾರ ರಾತ್ರಿ ಜಯಲಕ್ಷ್ಮೀಯವರು ಅಡುಗೆ ಸಿದ್ದಪಡಿಸಿ ಪತಿಗೆ ಉಣಬಡಿಸಿದ್ದರು. ಈ ವೇಳೆ ಪತ್ನಿ ಮೇಲೆ ಸಿಟ್ಟುಗೊಂಡ ನಾಗರಾಜ್ ಅಡುಗೆ ಸರಿಯಾಗಿ ಮಾಡಿಲ್ಲ ಎಂದು ನಿಂದಿಸಿದ್ದಾರೆ. ಈ ವಿಚಾರ ದಂಪತಿ ನಡುವೆ ಜಗಳವಾಗಿದೆ. ಗುರುವಾರ ಸಂಜೆ 6 ಗಂಟೆ ಸುಮಾರಿಗೆ ಮಕ್ಕಳನ್ನು ಹೊರಗೆ ಕಳುಹಿಸಿರುವ ಜಯಲಕ್ಷ್ಮೀಯವರು ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಜಯಲಕ್ಷ್ಮೀ ಪೋಷಕರು ಪುತ್ರಿ ಸಾವಿಗೆ ನಾಗರಾಜ್ ಕಾರಣ ಎಂಬು ಆರೋಪಿಸಿದ್ದಾರೆ. ಸಣ್ಣ ವಿಚಾರಗಳಿಗೆ ನಾಗರಾಜ್ ನಮ್ಮ ಪುತ್ರಿಗೆ ಕಿರುಕುಳ ನೀಡುತ್ತಿದ್ದ. ಮಗಳನ್ನು ಬೈಯ್ಯಲು ಒಂದಲ್ಲ ಒಂದು ಕಾರಣ ಹುಡುಕುತ್ತಿದ್ದ. ಮಗಳಿಗೆ ಅಡುಗೆ ಮಾಡಲು ಬರುವುದಿಲ್ಲ, ಮಕ್ಕಳನ್ನು ಹಾಗೂ ನನ್ನನ್ನು ಸರಿಯಾಗಿ ನೋಡಿಕೊಳ್ಳಲು ಬರುವುದಿಲ್ಲ ಎಂದು ಹೇಳುತ್ತಲೇ ಇದ್ದ. ಈ ಸಂಬಂಧ ಇಬ್ಬರ ನಡುವೆ ಜಗಳವಾಗುತ್ತಲೇ ಇತ್ತು ಎಂದು ಹೇಳಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





