Breaking News

ರೈತರ ಮೇಲೆ ಗೋಲಿಬಾರ್ ನಡೆಸಿ ಇಂದಿಗೆ ೧೧ ವರ್ಷ.

2008ರ ಜೂನ್ 10, ಆ ದಿನ ಹಾವೇರಿ ರೈತರ ಪಾಲಿಗೆ ಕರಾಳ ದಿನವಾಗಿದೆ. ರೈತರು ಬೀಜ, ಗೊಬ್ಬರಕ್ಕಾಗಿ ಪ್ರತಿಭಟನೆ ಮಾಡುವಾಗ ಪೊಲೀಸರು ಗುಂಡಿನ ದಾಳಿ ನಡೆಸಿದ್ದರು. ಮುಂಗಾರು ಬಿತ್ತನೆಗೆ ಗೊಬ್ಬರ ಕೇಳಿದ್ದಕ್ಕೆ ರೈತರ ಮೇಲೆ ಅಂದಿನ ಸಿಮ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಗೋಲಿಬಾರ ನಡೆಸಿತ್ತು. ಗೋಲಿಬಾರ್​ನಲ್ಲಿ ಇಬ್ಬರು ರೈತರು ಗುಂಡಿಗೆ ಬಲಿಯಾಗಿ, ಇತಿಹಾಸ ಪುಟದಲ್ಲಿ ಕರಾಳ ಅಧ್ಯಾಯವೊಂದು ಕಪ್ಪು ಚುಕ್ಕೆಯಾಗಿ ಅಚ್ಚಳಿಯದೆ ಶಾಶ್ವತವಾಗಿ ಉಳಿದಿದೆ. ಅದೂವರೆಗೂ ರೈತ ನಾಯಕನೆಂದು ಬೀಗುತ್ತಿದ್ದ ಯಡಿಯೂರಪ್ಪ ಅವರಿಗೆ ಈ ಘಟನೆಯು ಈಗಲೂ ಕಳಂಕದಂತೆ ಮೆತ್ತಿಕೊಂಡಿದೆ. ಯಡಿಯೂರಪ್ಪ ಸಿಎಮ್ ಆಗಿ ಕೇವಲ ಎಂಟೆ ದಿನಗಳಲ್ಲಿ ರೈತರ ಎದೆಗೆ ಗುಂಡೆಟೂ ಬಿದ್ದಿತ್ತು ಎಂಬುದು ಎಂದೆಂದೂ ಮರೆಯಲಾಗದ ಸಂಗತಿಯಾಗಿದೆ.

Share News

About admin

Check Also

ದುರಂತ: ಟ್ರ್ಯಾಕ್ಟರ್ ನಿಂದ ಬಿದ್ದು ಇಬ್ಬರು ದುರ್ಮರಣ!!

ಗೋಡಿಹಾಳ ಗ್ರಾಮದಿಂದ ಹರಿಹರಕ್ಕೆ ನಾಮಕರಣ ಶಾಸ್ತ್ರಕ್ಕೆ ಟ್ರ್ಯಾಕ್ಟರ್ ನಲ್ಲಿ ತೆರಳುತ್ತಿದ್ದ ವೇಳೆ ಟ್ರ್ಯಾಕ್ಟರ್ ಟ್ರೇಲರ್ ಮಗುಚಿ ಬಿದ್ದ ಪರಿಣಾಮ ಇಬ್ಬರು …

Leave a Reply

Your email address will not be published. Required fields are marked *