ರಾಜಧಾನಿ ಬೆಂಗಳೂರಿನಲ್ಲಿ ಆಘಾತಕಾರಿ ಕೊಲೆ ಪ್ರಕರಣ ನಡೆದಿದೆ. 26 ವರ್ಷದ ವಿಧವೆಯೊಂದಿಗೆ 52 ವರ್ಷದ ವ್ಯಕ್ತಿಯೊಬ್ಬ ಲಿವ್‌ಇನ್ ರಿಲೇಷನ್‌ನಲ್ಲಿದ್ದು ಆಕೆಗೆ ಬೇರೆ ಸಂಬಂಧ ಇರುವ ಬಗ್ಗೆ ತಿಳಿದ ತಕ್ಷಣ ಬೆಂಕಿ ಹಚ್ಚಿ ಕೊಂದಿರುವಂತಹ ಶಾಕಿಂಗ್ ಘಟನೆ ಬೆಂಗಳೂರಿನ ಹೊರವಲಯದ ಆನೇಕಲ್‌ನಲ್ಲಿ ನಡೆದಿದೆ.ಮೃತ ಮಹಿಳೆಯನ್ನು ವನಜಾಕ್ಷಿ ಎಂದು ಗುರುತಿಸಲಾಗಿದೆ. ಆರೋಪಿ ವಿಠ್ಠಲ ಈಗಾಗಲೇ ಎರಡು ಮದುವೆಯಾಗಿದ್ದು, ನಂತರ ವನಜಾಕ್ಷಿ ಜೊತೆ ಲಿವ್‌ಇನ್ ಸಂಬಂಧದಲ್ಲಿದ್ದ. ವಿಠಲ ಕ್ಯಾಬ್ ಚಾಲಕನಾಗಿದ್ದು, ಮೊದಲ ಪತ್ನಿ ಮೃತಪಟ್ಟಿದ್ದಳು. ಹೀಗಾಗಿ ಆತ ಎರಡನೇ ಮದುವೆಯಾಗಿದ್ದ. ಆದರೆ ಆತನ ಎರಡನೇ ಪತ್ನಿ ಬೇರೆಯವನೊಂದಿಗೆ ಓಡಿ ಹೋಗಿದ್ದಳು.
bigtvnews | Hubli Dharwad News | Kannada News | Karnataka News Hubli News | News In Hubli | Local news

