Breaking News

ಚಿನ್ನ ಮಾರಾಟದ ಹೆಸರಿನಲ್ಲಿ 3.80 ಲಕ್ಷ ರೂ. ವಂಚನೆ ಯತ್ನ

ಬಂಟ್ವಾಳದ ಮಂಚಿ ಸಮೀಪದ ಕುಕ್ಕಾಜೆಯಲ್ಲಿ ನಕಲಿ ಚಿನ್ನ ನೀಡಿ 3.80 ಲಕ್ಷ ರೂ. ವಂಚಿಸಲು ಯತ್ನಿಸಿದ ಘಟನೆ ನಡೆದಿದೆ. ಮೈಸೂರಿನ ಮಹೇಶ್ ಕುಮಾರ್ ಎಂಬುವವರು ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಜಿಯಾದ್ ಎಂಬಾತ ತನ್ನ ಬಳಿ 37.2 ಗ್ರಾಂ ನೈಜ ಚಿನ್ನವಿದೆ ಎಂದು ನಂಬಿಸಿ, ನ.20ರಂದು ಮಹೇಶ್ ಅವರಿಂದ 3.80 ಲಕ್ಷ ರೂ. ಪಡೆದಿದ್ದಾನೆ. ಆದರೆ ಚಿನ್ನದ ಆಭರಣ ಪರಿಶೀಲಿಸಿದಾಗ ಅದು ನಕಲಿ ಎಂಬ ಅನುಮಾನ ವ್ಯಕ್ತವಾಗಿದೆ. ಹಣ ಹಿಂದಿರುಗಿಸುವಂತೆ ಕೇಳಿದಾಗ ಆರೋಪಿ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಬಳ್ಳಾರಿ: ಅಣ್ಣನ ಕೊಲೆಗೆ ಯತ್ನಿಸಿದ್ದ ತಮ್ಮನಿಗೆ 6 ವರ್ಷ ಜೈಲು

ಬಳ್ಳಾರಿ: ಅಕ್ರಮ ಸಂಬಂಧದ ಶಂಕೆಯಿಂದ ಸ್ವಂತ ಅಣ್ಣನ ಮೇಲೆಯೇ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದ ಪ್ರಕರಣದಲ್ಲಿ ಬಳ್ಳಾರಿಯ ಮಂಜುನಾಥ.ಟಿ ಎಂಬಾತನಿಗೆ …

Leave a Reply

Your email address will not be published. Required fields are marked *