Breaking News
Featured Video Play Icon

ಪತ್ರಕರ್ತನ ಮೇಲೆ ಹಲ್ಲೆ ಮಾಡಿದ ಎಎಸ್ಐ ಪತ್ತಾರ್ ಅಮಾನತು

ಹುಬ್ಬಳ್ಳಿ : ಯಾವುದೇ ಕಾರಣವಿಲ್ಲದೇ ಹವ್ಯಾಸಿ ಪತ್ರಕರ್ತ ಮೇಲೆ ಕಮರಿಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಲ್ಲೆ ಮಾಡಲಾಗಿದ್ದು, ಆ ಠಾಣೆಯ ಎಎಸ್ಐ ಪತ್ತಾರ್ ಅಮಾನತು ಇದೀಗ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಈ ಕುರಿತು ಹುಬ್ಬಳ್ಳಿ ಉತ್ತರ ಉಪವಿಭಾಗದ ಎಸಿಪಿ ರವರನ್ನು ವಿಚಾರಣೆ ನಡೆಸಲು ನೇಮಿಸಲಾಗಿದೆ.

ರಾತ್ರಿ ವೇಳೆ ಐದಾರು ಪೊಲೀಸರು ಹವ್ಯಾಸಿ ಪತ್ರಕರ್ತ ಭರತ ತುಳಜಾಸಾ ಕಾಟ್ವೆ ಅವರ ಮನೆಗೆ ಆಗಮಿಸಿ ಊಟ ಮಾಡುತ್ತಿದ್ದ ಭರತನನ್ನ ಹೊಡೆಯುತ್ತಾ ರಸ್ತೆ ಮೇಲೆ ಕರೆದುಕೊಂಡು ಬಂದು ಪೊಲೀಸ್ ಠಾಣೆಯಲ್ಲಿ ಹೊಡ್ದಿದ್ದಾಗಿ ಭರತ್ ಮಾಹಿತಿ ನೀಡುತ್ತಾನೆ. ತಲೆಗೆ ಬೆನ್ನಿಗೆ ತಿಗಕ್ಕೆ ಕುಳಿತುಕೊಳ್ಳದ ಹಾಗೆ ರಕ್ತ ಬರುತ್ತಿದೆ. ಇವನನ್ನ ಮನ್ಸೂ ಇಚ್ಛೆ ಎಎಸ್ಐ ಪತ್ತಾರ್ ಹಾಗೂ 5 ಪೊಲೀಸರು ಇವನನ್ನ ಮೈತುಂಬ ತಳಸಿದ್ದರು. ಯಾವ ಕಾರಣಕ್ಕೆ ಹೊಡೆದರೂ ಎನ್ನುವುದು ಸಹ ವ್ಯಕ್ತಿಗೆ ಗೊತ್ತಿಲ್ಲ.

ನಂತರ ಮತ್ತೆ ಈ ವ್ಯಕ್ತಿ ರಾತ್ರಿ ಹನ್ನೊಂದು ಗಂಟೆಗೆ ಠಾಣೆಗೆ ಹೋಗಿ ನನಗೆ ಯಾವ ಕಾರಣಕ್ಕೆ ಹೊಡೆದಿದ್ದೀರಿ ಸಾಹೇಬ್ರೆ ಎಂದು ಕೇಳಿದಾಗ ಮತ್ತೆ ಹೊಡೆದು ಕಳ್ಸಿದ್ದಾರೆ.ಪೊಲೀಸರೇ ಗುಂಡಾಗಳ ಹಾಗೆ ಹೊಡೆದರೆ ಮುಂದೆ ಯಾರು ಜವಾಬ್ದಾರರು‌ ಎಂಬುದು ಯಕ್ಷ ಪ್ರಶ್ನೆಯಾಗಿದೆ.

Share News

About Shaikh BigTv

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *