Breaking News

ಬೆಂಗಳೂರಿನಲ್ಲಿ ಲಾಡ್ಜ್‌ನಿಂದ ತಳ್ಳಿ ಪ್ರೇಯಸಿಯ ಕೊಲೆ; ಪ್ರಿಯಕರ ಅರೆಸ್ಟ್!

ಬೆಂಗಳೂರಿನ ಅಬ್ಬಿಗೆರೆ ವೈಮ್ಯಾಕ್ಸ್ ಸರ್ಕಲ್‌ನಲ್ಲಿರುವ ಲಾಡ್ಜ್‌ನಲ್ಲಿ ಪ್ರೇಮಿಯೇ ಯುವತಿಯನ್ನು ಮೇಲಿನಿಂದ ತಳ್ಳಿ ಕೊಲೆ ಮಾಡಿರುವ ಘಟನೆ ನಡೆದಿದೆ. ಹಾಸನ ಜಿಲ್ಲೆಯ ಐಶ್ವರ್ಯ (ಖಾಸಗಿ ಕಂಪನಿ ಉದ್ಯೋಗಿ) ಮೃತ ಯುವತಿ. ನವೆಂಬರ್ 19ರಂದು ಪ್ರಿಯಕರ ಸಂತೋಷ್ ಜೊತೆ ಲಾಡ್ಜ್‌ಗೆ ತೆರಳಿದ್ದರು. ಲಾಡ್ಜ್‌ನಲ್ಲಿ ಕ್ಷುಲ್ಲಕ ವಿಚಾರಕ್ಕೆ ಇಬ್ಬರ ನಡುವೆ ಜಗಳ ಆರಂಭವಾಗಿದ್ದು, ಅದು ವಿಕೋಪಕ್ಕೆ ತಿರುಗಿದೆ. ಈ ವೇಳೆ ಸಂತೋಷ್, ಐಶ್ವರ್ಯಳನ್ನು ಮೇಲಿನಿಂದ ಕೆಳಕ್ಕೆ ತಳ್ಳಿದ್ದಾನೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ಯುವತಿ ಮೃತಪಟ್ಟಿದ್ದಾರೆ. ಆರಂಭದಲ್ಲಿ ಆತ್ಮಹತ್ಯೆ ಎಂದು ಪ್ರಕರಣ ದಾಖಲಿಸಿಕೊಂಡಿದ್ದ ಗಂಗಮ್ಮನಗುಡಿ ಪೊಲೀಸರು ತನಿಖೆ ನಡೆಸಿದಾಗ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ. ಸದ್ಯ ಆರೋಪಿ ಸಂತೋಷ್‌ನನ್ನು ಬಂಧಿಸಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

Share News

About BigTv News

Check Also

ಪೊಲೀಸ್ ಠಾಣೆಯಲ್ಲೇ ಕಿರಿಕ್, ಖಾರದ ಪುಡಿ ಎರಚಿ ಚಾಕುವಿನಿಂದ ದಾಳಿ!

ತುಮಕೂರು: ಪಾವಗಡ ಪೊಲೀಸ್ ಠಾಣೆಯಲ್ಲಿ ವಿಚಾರಣೆಗಾಗಿ ಬಂದಿದ್ದ ಯುವಕನ ಮೇಲೆ ಆತನ ಭಾವ ಮಂಜುನಾಥ ಖಾರದ ಪುಡಿ ಎರಚಿ ಚಾಕುವಿನಿಂದ …

Leave a Reply

Your email address will not be published. Required fields are marked *