ಬೆಂಗಳೂರು: ರಾತ್ರಿ ವೇಳೆ ಕ್ಯಾಬ್ ಹಾಗೂ ರ್ಯಾಪಿಡೋ ಚಾಲಕರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿ ಹಣ ಸುಲಿಗೆ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ವೈಟ್‌ಫೀಲ್ಡ್ ಪೊಲೀಸರು ಬಂಧಿಸಿದ್ದಾರೆ. ಮನೋಜ್, ಪ್ರೀತಮ್ ಪ್ರಕಾಶ್, ಸಯ್ಯದ್ ಶಫಿ ಮತ್ತು ಅಖಿಲೇಶ್ ಬಂಧಿತರು. ನಲ್ಲೂರಹಳ್ಳಿ ಮೆಟ್ರೋ ನಿಲ್ದಾಣದ ಬಳಿ ರ್ಯಾಪಿಡೋ ಚಾಲಕನನ್ನು ಅಡ್ಡಗಟ್ಟಿ ಹಲ್ಲೆ ನಡೆಸಿ ಮೊಬೈಲ್ ಮೂಲಕ ಹಣ ವರ್ಗಾಯಿಸಿಕೊಂಡಿದ್ದರು. ಆರೋಪಿಗಳು ಬಳಸಿದ್ದ ಬಾಡಿಗೆ ಕಾರನ್ನು ಪೊಲೀಸರು ತಾಂತ್ರಿಕವಾಗಿ ಸ್ಥಗಿತಗೊಳಿಸಿ ಬಂಧಿಸಿದ್ದಾರೆ. ಡ್ರಗ್ಸ್ ಖರೀದಿಸಲು ಸುಲಿಗೆ ಮಾಡುತ್ತಿದ್ದ ಆರೋಪಿಗಳು, ಕಳೆದ ಮೂರು ತಿಂಗಳಲ್ಲಿ ಸುಮಾರು 30 ಕೃತ್ಯ ಎಸಗಿರುವುದಾಗಿ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾರೆ. ಪೊಲೀಸರು ಈಗಾಗಲೇ 11 ಸುಲಿಗೆ ಪ್ರಕರಣಗಳನ್ನು ಪತ್ತೆಹಚ್ಚಿದ್ದಾರೆ. ಸುಲಿಗೆಗೆ ಒಳಗಾದವರು ಭಯಪಡದೆ ಪೊಲೀಸರಿಗೆ ದೂರು ನೀಡುವಂತೆ ಬೆಂಗಳೂರು ಪೂರ್ವ ವಲಯದ ಕಮಿಷನರ್ ಮನವಿ ಮಾಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news
