Breaking News

₹11.44 ಕೋಟಿ ಡ್ರಗ್ಸ್‌ ಜಪ್ತಿ: ಯಲಹಂಕದಲ್ಲಿ ಯುವಕ, ಯುವತಿ ಸೆರೆ

ಬೆಂಗಳೂರು: ದೆಹಲಿಯಿಂದ ಬೆಂಗಳೂರಿಗೆ MDMA ಡ್ರಗ್ಸ್ ತಂದು ಮಾರಾಟ ಮಾಡುತ್ತಿದ್ದ ಇಮ್ರಾನ್ ಪಾಷಾ (28) ಮತ್ತು ಆಯಿಷಾ ಸಿದ್ದಿಕಿ (27) ಎಂಬುವವರನ್ನು ಯಲಹಂಕ ನ್ಯೂಟೌನ್ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ₹11.44 ಕೋಟಿ ಮೌಲ್ಯದ 5.720 ಕೆ.ಜಿ. MDMA ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ವ್ಯಾನಿಟಿ ಬ್ಯಾಗ್‌ಗಳಲ್ಲಿ ಡ್ರಗ್ಸ್ ಸಾಗಿಸಿ, ನಿರ್ಜನ ಪ್ರದೇಶಗಳಲ್ಲಿ ಇರಿಸಿ ಮೊಬೈಲ್ ಲೊಕೇಶನ್ ಮೂಲಕ ಗ್ರಾಹಕರಿಗೆ ಮಾಹಿತಿ ನೀಡುತ್ತಿದ್ದರು. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ. ಪ್ರಕರಣದ ಮತ್ತೊಬ್ಬ ಆರೋಪಿ ಸಾದಿಯಾಗಾಗಿ ಶೋಧ ಮುಂದುವರಿದಿದೆ. ಮತ್ತೊಂದು ಪ್ರಕರಣದಲ್ಲಿ ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಶೇಖ್ ಮುದಾಸೀರ್‌ನನ್ನು ಬಂಧಿಸಿ ₹30 ಲಕ್ಷ ಮೌಲ್ಯದ 150 ಗ್ರಾಂ MDMA ಜಪ್ತಿ ಮಾಡಲಾಗಿದೆ.

Share News

About BigTv News

Check Also

7 ಮಂದಿ ಕೊ*ಲೆ ಪ್ರಕರಣ, ಹಂತಕನ ಮಗಳ ಭಯಾನಕ ಕೃತ್ಯ ಬಯಲು!

ಬೆಂಗಳೂರು: ಒಂದೇ ಕುಟುಂಬದ 7 ಜನರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಹಂತಕನ ಅಪ್ರಾಪ್ತ ಪುತ್ರಿಯ ಪಾತ್ರದ ಬಗ್ಗೆ ಆಘಾತಕಾರಿ ಮಾಹಿತಿ …

Leave a Reply

Your email address will not be published. Required fields are marked *