Breaking News

ಮೊದಲ ಕಾರ್ಯಚರಣೆಯಲ್ಲೇ ಬೆಂಗಳೂರು ರೌಡಿಗಳ ನಡುಗಿಸಿದ ಆಯಂಟಿ ರೌಡಿ ಸ್ಕ್ವಾಡ್: 7 ಮಂದಿ ಬಂಧನ

ಬೆಂಗಳೂರು: ನಗರದಲ್ಲಿ ರೌಡಿ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಆ್ಯಂಟಿ ರೌಡಿ ಸ್ಕ್ವಾಡ್ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ವಿವಿಧ ಪ್ರಕರಣಗಳಲ್ಲಿ ಬೇಕಾಗಿದ್ದ ಏಳು ಮಂದಿಯನ್ನು ಬಂಧಿಸಿದ್ದಾರೆ. ಬುಧವಾರ ರಾತ್ರಿ ನಗರದ 30ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ಬಂಧಿತರಲ್ಲಿ ಅವೆಜ್, ಮಣಿರಾಜ್, ಶಶಿಕುಮಾರ್, ಪ್ರಭು, ಆಯುಬ್ ಖಾನ್, ರಾಜು ಅಲಿಯಾಸ್ ಕರಿಯ ರಾಜು ಹಾಗೂ ಸತೀಶ್ ಕುಮಾರ್ ಸೇರಿದ್ದಾರೆ. ಇವರ ವಿರುದ್ಧ ಕೊಲೆಯತ್ನ, ದರೋಡೆ, ಹಲ್ಲೆ, ಲೈಂಗಿಕ ದೌರ್ಜನ್ಯ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ. ಬಂಧಿತರ ಪೈಕಿ ರಾಜು ವಿರುದ್ಧ 28 ಪ್ರಕರಣಗಳು, ಆಯುಬ್ ಖಾನ್ ವಿರುದ್ಧ 9 ಹಾಗೂ ಸತೀಶ್ ಕುಮಾರ್ ವಿರುದ್ಧ 11 ಪ್ರಕರಣಗಳಿವೆ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಪೊಲೀಸರ ಕಾರ್ಯಾಚರಣೆ ಮುಂದುವರಿದಿದೆ.

Share News

About BigTv News

Check Also

7 ಮಂದಿ ಕೊ*ಲೆ ಪ್ರಕರಣ, ಹಂತಕನ ಮಗಳ ಭಯಾನಕ ಕೃತ್ಯ ಬಯಲು!

ಬೆಂಗಳೂರು: ಒಂದೇ ಕುಟುಂಬದ 7 ಜನರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಹಂತಕನ ಅಪ್ರಾಪ್ತ ಪುತ್ರಿಯ ಪಾತ್ರದ ಬಗ್ಗೆ ಆಘಾತಕಾರಿ ಮಾಹಿತಿ …

Leave a Reply

Your email address will not be published. Required fields are marked *