ಬೆಂಗಳೂರು: ಒಂದೇ ಕುಟುಂಬದ 7 ಜನರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಹಂತಕನ ಅಪ್ರಾಪ್ತ ಪುತ್ರಿಯ ಪಾತ್ರದ ಬಗ್ಗೆ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಕೊಲೆಯಾದವರ ಶವಗಳ ಪಕ್ಕದಲ್ಲೇ ಬಾಲಕಿ ರಾತ್ರಿ ಮಲಗುತ್ತಿದ್ದಳು ಎನ್ನಲಾಗಿದೆ. ಕೊಲೆ ವೇಳೆ ಹಗ್ಗ, ಟೇಪ್, ಚೀಲ ಸಿದ್ಧಪಡಿಸುವುದು, ಮೃತದೇಹಗಳನ್ನು ಪ್ಯಾಕ್ ಮಾಡುವುದು ಹಾಗೂ ಫಿನಾಯಿಲ್ ಹಾಕಿ ರಕ್ತದ ಕಲೆಗಳನ್ನು ಸ್ವಚ್ಛಗೊಳಿಸುವ ಕೆಲಸದಲ್ಲಿ ತಂದೆಗೆ ಸಹಕರಿಸಿದ್ದಳು ಎಂದು ಪೊಲೀಸ್ ವಿಚಾರಣೆಯಲ್ಲಿ ತಿಳಿಸಿದ್ದಾಳೆ. ಸದ್ಯ ಬಾಲಕಿಯ ಕಸ್ಟಡಿ ಮುಗಿದಿದ್ದು, ದಾವಣಗೆರೆಯ ಬಾಲಮಂದಿರಕ್ಕೆ ಕರೆದೊಯ್ದು ಬಿಡಲಾಗಿದೆ. ಹಂತಕನ ಪೊಲೀಸ್ ಕಸ್ಟಡಿ ಇಂದಿಗೆ ಮುಕ್ತಾಯವಾಗಲಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.
Check Also
ಬೆಂಗಳೂರಿನಲ್ಲಿ ಕ್ಯಾಬ್, ರ್ಯಾಪಿಡೋ ಚಾಲಕರನ್ನೇ ಟಾರ್ಗೆಟ್ ಮಾಡಿ ಸುಲಿಗೆ ಮಾಡುತ್ತಿದ್ದ 4 ಜನರ ಗ್ಯಾಂಗ್ ಲಾಕ್
ಬೆಂಗಳೂರು: ರಾತ್ರಿ ವೇಳೆ ಕ್ಯಾಬ್ ಹಾಗೂ ರ್ಯಾಪಿಡೋ ಚಾಲಕರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿ ಹಣ ಸುಲಿಗೆ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು …
bigtvnews | Hubli Dharwad News | Kannada News | Karnataka News Hubli News | News In Hubli | Local news
