Breaking News

ಗ್ರಾಹಕರ ಖಾತೆಯಿಂದ ₹1.3 ಕೋಟಿ ಮಾಯ : ಕೆನರಾ ಬ್ಯಾಂಕಿನ ಆರು ಅಧಿಕಾರಿಗಳ ವಿರುದ್ಧ FIR ದಾಖಲು

ಬೆಳಗಾವಿಯಲ್ಲಿ ಗ್ರಾಹಕರ ಅನುಮತಿಯಿಲ್ಲದೆ ಖಾತೆಯಿಂದ ₹1.3 ಕೋಟಿಗೂ ಹೆಚ್ಚು ಹಣ ವರ್ಗಾಯಿಸಿದ ಆರೋಪದ ಮೇಲೆ ಕೆನರಾ ಬ್ಯಾಂಕ್‌ನ ಹಾಲಿ ಮತ್ತು ಮಾಜಿ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಉದ್ಯಮಿ ಸುರೇಶ್ ಶಿವಂಗೇಕರ್ ಈ ಕುರಿತು ತಿಲಕವಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬ್ಯಾಂಕ್ ಅಧಿಕಾರಿಗಳು ತಪ್ಪಾಗಿ ಹಣ ವರ್ಗಾವಣೆಯಾಗಿದೆ ಎಂದು ಒಪ್ಪಿಕೊಂಡು ₹46 ಲಕ್ಷ ವಾಪಸ್ ನೀಡಿದ್ದಾರೆ. ಉಳಿದ ₹86.3 ಲಕ್ಷ ಹಿಂದಿರುಗಿಸಿಲ್ಲ ಎಂದು ಉದ್ಯಮಿ ಆರೋಪಿಸಿದ್ದಾರೆ. ಈ ಸಂಬಂಧ ಐವರು ಬ್ಯಾಂಕ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Share News

About BigTv News

Check Also

ಕಾರಟಗಿ: ಎರಡು ಕೋಮುಗಳ ಮಧ್ಯೆ ಘರ್ಷಣೆ, 120 ಜನರ ವಿರುದ್ಧ ಪ್ರಕರಣ

ಕಾರಟಗಿ ತಾಲೂಕಿನ ಹಾಲಸಮುದ್ರ ಗ್ರಾಮದಲ್ಲಿ ಗೌರಿ ಹುಣ್ಣಿಮೆ ನಿಮಿತ್ತ ಮೂರ್ತಿ ಪ್ರತಿಷ್ಠಾಪನೆ ವಿಚಾರವಾಗಿ ಎರಡು ಕೋಮುಗಳ ನಡುವೆ ಘರ್ಷಣೆ ನಡೆದಿದೆ. …

Leave a Reply

Your email address will not be published. Required fields are marked *