ನಾಡಪ್ರಭು ಕೆಂಪೇಗೌಡರ
ಜಯಂತಿಯ ಕಾರ್ಯಕ್ರಮಕ್ಕೆ ಸಂಸದೆ ಸುಮಲತಾ ಅವರನ್ನು ಆಹ್ವಾನ ಪತ್ರಿಕೆಯಲ್ಲಿ ಹೆಸರು ಕೈ ಬಿಟ್ಟು
ಕಾರ್ಯಕ್ರಮಕ್ಕೆ ಆಹ್ವಾನಿಸದೆ ಸಂಸದರಿಗೆ ತಹಶಿಲ್ದಾರ್ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ
ಕಾಂಗ್ರೆಸ್ ಮುಖಂಡರು ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯಲ್ಲಿ ತಹಸೀಲ್ದಾರ್ ಕಛೇರಿಗೆ ಮುತ್ತಿಗೆ ಹಾಕಿದರು.
ಅಧಿಕಾರದ ಮದದಿಂದ ತಹಸೀಲ್ದಾರ್ ಶಿವಮೂರ್ತಿ ವರ್ತಿಸುತ್ತಿದ್ದಾರೆ ಎಂಬ ಆರೋಪ ಮಾಡಿರುವ
ಕೈ ಕಾರ್ಯಕರ್ತರು ತಹಸೀಲ್ದಾರ್ ವರ್ಗಾವಣೆಗೆ ಒತ್ತಾಯಿಸಿದರು. ಇವರ ವಿರುದ್ಧ ಶಿಸ್ತು ಕ್ರಮಕ್ಕೆ ಡಿಸಿಗೆ ಮನವಿ ಮಾಡುವುದಾಗಿ ತಿಳಿಸಿದ್ದಾರೆ.
ಇನ್ನೂ ಪ್ರತಿಭಟನೆಗೆ ಹೆದರಿದ ತಹಸೀಲ್ದಾರ್ ಮುಖಂಡರಲ್ಲಿ ಕ್ಷಮೆಯಾಚಿಸಿದ್ದಾರೆ.
ಈ ಮೂಲಕ ತಹಸೀಲ್ದಾರ್ ಗೆ ಕಾಂಗ್ರೆಸ್ ಮುಖಂಡರು ಬೆವರು ಇಳಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





