Breaking News

ಬೆಳಗಾವಿಯಲ್ಲಿ ಮತ್ತೊಂದು ಬಹುಕೋಟಿ ವಂಚನೆ ಪ್ರಕರಣ: 1 ಲಕ್ಷಕ್ಕೆ ಮಾಸಿಕ ಶೇ.3 ಬಡ್ಡಿ ಆಸೆ ತೋರಿಸಿ ಮಕ್ಮಲ್​​ ಟೋಪಿ

ಬೆಳಗಾವಿ: ಹೆಚ್ಚಿನ ಬಡ್ಡಿ ನೀಡುವ ಆಮಿಷವೊಡ್ಡಿ ಸಾವಿರಾರು ಜನರಿಂದ ₹133 ಕೋಟಿ ಹೂಡಿಕೆ ಮಾಡಿಸಿಕೊಂಡು ತಾಯಿ-ಮಗ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ಕಚೇರಿ ತೆರೆದು ನಂದಾ ಪಾಟೀಲ್ ಹಾಗೂ ಪುತ್ರ ಪ್ರಸಾದ್ ಪಾಟೀಲ್ ವಂಚನೆ ನಡೆಸಿದ್ದಾರೆ. ₹1 ಲಕ್ಷ ಹೂಡಿಕೆ ಮಾಡಿದರೆ ಮಾಸಿಕ ಶೇ.3ರಷ್ಟು ಬಡ್ಡಿ ನೀಡುವುದಾಗಿ ಆಮಿಷವೊಡ್ಡಿದ್ದರು. ಹೂಡಿಕೆದಾರರು ಅಸಲು ಹಣ ಕೇಳಿದಾಗ ಬೆದರಿಕೆ ಹಾಕುತ್ತಿದ್ದರು. ಹೂಡಿಕೆ ಹಣದಿಂದ ಜಮೀನು, ಆಸ್ತಿ ಖರೀದಿಸಿ ಐಷಾರಾಮಿ ಜೀವನ ನಡೆಸುತ್ತಿದ್ದರು ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಂದಾ, ಪ್ರಸಾದ್ ಸೇರಿ 12 ಜನರ ವಿರುದ್ಧ ನಿಪ್ಪಾಣಿ ಬಸವೇಶ್ವರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಆರೋಪಿಗಳು ಪರಾರಿಯಾಗಿದ್ದು, ಅವರ ಪತ್ತೆಗೆ ಬೆಳಗಾವಿ ಎಸ್‌ಪಿ ರಾಮರಾಜನ್ ವಿಶೇಷ ತಂಡ ರಚಿಸಿದ್ದಾರೆ.

Share News

About BigTv News

Check Also

ಹಣಕಾಸಿನ ವಿಚಾರಕ್ಕೆ ಸ್ನೇಹಿತನನ್ನೇ ಕೊಂದು ತುಂಡು ತುಂಡಾಗಿ ಮೃತದೇಹ ಕತ್ತರಿಸಿ ಎಸೆದ ದುರುಳರು!

ಬಳ್ಳಾರಿ ಜಿಲ್ಲೆಯ ತೆಕ್ಕಲಕೋಟೆಯಲ್ಲಿ ಹಣಕಾಸಿನ ವಿಚಾರಕ್ಕೆ ಸ್ನೇಹಿತರೇ ಹನುಮಂತಪ್ಪ (38) ಎಂಬುವವರನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಒಂದು ಲಕ್ಷ ರೂಪಾಯಿ …

Leave a Reply

Your email address will not be published. Required fields are marked *