ಕಿಂಗ್ ಸ್ಟಾರ್ ಯಶ್ ದಸರಾ ಹಬ್ಬವನ್ನ ಜೋರಾಗಿಯೇ ಆಚರಿಸುತ್ತಿದ್ದಾರೆ. ನಾಡಿನ ಜನತೆಗೆ ದಸರಾ ಹಬ್ಬದ ಶುಭಾಷಯವನ್ನ ತಿಳಿಸಿದ್ದಾರೆ ಯಶ್ ಮತ್ತು ರಾಧಿಕಾ. ಇದೀಗ ದಸರಾ ಹಬ್ಬದ ನಿಮಿತ್ತ ಯಶ್ ಮತ್ತು ರಾಧಿಕಾ ಪೋಟೋಶೂಟ್ ಮಾಡಿಸಿಕೊಂಡಿದ್ದು, ಈ ಫೋಟೋಶೂಟ್ ನೋಡುಗರ ಗಮನ ಸೆಳೆಯುತ್ತಿದೆ.
ಮಿಸ್ಟರ್ ಆಯಂಡ್ ಮಿಸಸ್ ರಾಮಾಚಾರಿ ಸಾಂಪ್ರದಾಯಿಕ ಉಡುಗೆ ಅಂದ್ರೆ ರಾಧಿಕಾ ಪಂಡಿತ್ ಲೈಟ್ ಬ್ಲೂ ಕಲರ್ನ ಸೀರೆಯುಟ್ರೆ ಯಶ್ ರಾಧಿಕಾ ಸೀರೆಗೆ ಮ್ಯಾಚ್ ಆಗುವಂತೆ ಗ್ರೇ ಕಲರ್ ಪೈಜಾಮ ಹಾಕಿಕೊಂಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಎಂದಿನಂತೆ ಇಲ್ಲಿ ತಮ್ಮ ಲಾಂಗ್ ಕುರ್ತಾ ತೊಟ್ಟು ಸಖತ್ ಆಗಿಯೇ ಕಾಣಿಸುತ್ತಿದ್ದಾರೆ. ಅಷ್ಟೇ ಅಲ್ಲ ಲೈಟ್ ಮೇಕಪ್ನಲ್ಲಿ ರಾಧಿಕಾ ಸಿಂಪಲ್ ಲುಕ್ಗೆ ಫ್ಯಾನ್ಸ್ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಮತ್ತು ಸ್ಯಾಂಡಲ್‌ವುಡ್ ಎವರ್ಗ್ರೀನ್ ಬ್ಯೂಟಿ ರಾಧಿಕಾ ಸಖತ್ ಆಗಿ ಕಾಣಿಸಿಕೊಂಡಿದ್ದಾರೆ.
ರಾಧಿಕಾ ತಮ್ಮ ಫೋಟೋ ಮಾತ್ರವಲ್ಲ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಮಕ್ಕಳಾದ ಐರಾ ಮತ್ತು ಯಥರ್ವ್ ಸೈಕಲ್ಗೆ ಪೂಜೆ ಮಾಡಿರುವ ಫೋಟೋವನ್ನ ಹಂಚಿಕೊಂಡಿದ್ದು ಅದೂ ತುಂಬಾ ಕ್ಯೂಟ್ ಆಗಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





