Breaking News

ಮೈಸೂರು ದಸರಾಗೆ ಸಿದ್ಧತೆ: 7ರಂದು ಗಜಪಯಣ


ಮೈಸೂರು: ಕೋವಿಡ್ ಪಿಡುಗಿನ ಕಾರಣಕ್ಕೆ ಕಳೆದ ಎರಡು ವರ್ಷ ಸರಳವಾಗಿ ಐತಿಹಾಸಿಕ ಮೈಸೂರು ದಸರಾ ಹಬ್ಬ ನಡೆದಿತ್ತು. ಈ ಬಾರಿ ಅದ್ಧೂರಿಯಾಗಿ ನಾಡಹಬ್ಬ ನಡೆಸಲು ಸರ್ಕಾರ ತೀರ್ಮಾನಿಸಿದೆ. ಮೈಸೂರು ದಸರಾದ ಮೊದಲ ಹಂತವಾದ ಗಜಪಯಣ ಆಗಸ್ಟ್ 7ರಂದು ಆರಂಭವಾಗಲಿದೆ.

ಮೈಸೂರು ದಸರಾ 2022ರಲ್ಲಿ ಪಾಲ್ಗೊಳ್ಳುವ ಆನೆಗಳು ನಾಗರಹೊಳೆ ಶಿಬಿರದಿಂದ ಮೈಸೂರು ಅರಮನೆಗೆ ಹೊರಡಲಿವೆ. ಈ ಮೂಲಕ ಈ ಬಾರಿಯ ದಸರಾ ಮಹೋತ್ಸವಕ್ಕೆ ಅಧಿಕೃತವಾದ ಆರಂಭ ಸಿಗಲಿದೆ.

ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಹೊರ ವಲಯದಲ್ಲಿರುವ ನಾಗಾಪುರ ಸಣ್ಣಗ್ರಾಮದ ಸಮೀಪವೀರುವ ವೀರನಹೊಸಹಳ್ಳಿಯಲ್ಲಿ ಭಾನುವಾರ ಬೆಳಗ್ಗೆ 9.01ರಿಂದ 9.35ರ ಮಧ್ಯದ ಶುಭ ಕನ್ಯಾ ಲಗ್ನದಲ್ಲಿ ಗಜಪಡೆಗಳ ಪಯಣ ಶುರುವಾಗಲಿದೆ.

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *