Breaking News

ರಾಜ್ಯದ ಹಾಲಿ, ಮಾಜಿ ಮಂತ್ರಿಗಳಿಗೆ ಕುಂದಗೋಳ ಕ್ಷೇತ್ರದ ಅಭಿವೃದ್ಧಿ ಕಾಳಜಿ ಇಲ್ಲ: ಸೊಪ್ಪಿನ

ಹುಬ್ಬಳ್ಳಿ: ಕುಂದಗೋಳ ಉಪಚುನಾವಣೆ ಪ್ರಚಾರದಲ್ಲಿ ರಾಜ್ಯದ ಎಲ್ಲ ರಾಜಕೀಯ ಮುಖಂಡರು ಹಾಗೂ ಹಾಲಿ, ಮಾಜಿ ಮಂತ್ರಿಗಳು ಅಭ್ಯರ್ಥಿ ಗೆಲ್ಲಿಸುವ ದಾವಂತದಲ್ಲಿದ್ದಾರೆ. ಅಲ್ಲದೇ ಗೆಲುವಿನ ರಣತಂತ್ರ ರೂಪಿಸುತ್ತಿದ್ದಾರೆ. ವಿನಃ ಯಾರಿಗೂ ಕೂಡ ಸ್ಥಳೀಯ ಸಮಸ್ಯೆಗಳ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಕೇಂದ್ರ ಸಮಿತಿಯ ಸದಸ್ಯ ವಿಕಾಸ ಸೊಪ್ಪಿನ ತಿಳಿಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಂದಗೋಳ ಉಪಚುನಾವಣೆ ಪ್ರಚಾರದಲ್ಲಿ ರಾಜಕೀಯ ಪಕ್ಷದ ಮುಖಂಡರ ದಂಡು ಕುಂದಗೋಳದತ್ತ ಹರಿದು ಬಂದಿದೆ ಆದರೇ ಮುಖಂಡರು ಬಂದಿರುವುದು ಸ್ಥಳೀಯ ಸಮಸ್ಯೆಗಳನ್ನು ಪರಿಶೀಲಿಸಲು ಅಲ್ಲ ಅವರು ಬಂದಿರುವುದು ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ರಣತಂತ್ರ ಹೆಣೆದು ಅಧಿಕಾರದ ಚುಕ್ಕಾಣಿ ಹಿಡಿಯಲು ಮಾತ್ರ. ಅವರಿಗೆ ಯಾವುದೇ ಮಹಿಳೆಯರ, ವಿದ್ಯಾರ್ಥಿಗಳ, ಯುವಕರ ಹಾಗೂ ಕುಂದಗೋಳ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಅವಶ್ಯಕತೆಯಿಲ್ಲ ಎಂದರು. ಕುಂದಗೋಳ ಕ್ಷೇತ್ರದ ಜನತೆ ಇದನ್ನೆಲ್ಲಾ ಕೂಲಂಕುಷವಾಗಿ ಗಮನಿಸುವ ಮೂಲಕ ಸ್ಥಳೀಯ ಕೆ.ಆರ್.ಎಸ್ ಪಕ್ಷದ ಪಕ್ಷೇತರ ಅಭ್ಯರ್ಥಿ ಶೈಲಾ ಗೋಣಿಯವರಿಗೆ ತಮ್ಮ ಅಮೂಲ್ಯವಾದ ಮತವನ್ನು ನೀಡುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ಅವರು ಹೇಳಿದರು. ಬಳಿಕ ಕಳಸಾ ಬಂಡೂರಿ ವಿಚಾರವಾಗಿ ಮಾತಾನಾಡಿದ ಅವರು, ಸರಕಾರ ಮತ್ತು ವಿರೋಧ ಪಕ್ಷಗಳ ಕೆಸರೆರಚಾಟ ಮುಂದುವರೆದಿದ್ದು, ಇಂತಹ ನಿಷ್ಕಾಳಜಿಯನ್ನು ದೊರ ಸರಿಸುವ ಹಾಗೂ ಉತ್ತರ ಕರ್ನಾಟಕ ಅಭಿವೃದ್ಧಿಗೆ ಶ್ರಮಿಸುವ ಸದುದ್ದೇಶದಿಂದ ನಮ್ಮ ಅಭ್ಯರ್ಥಿ ಶೈಲಾ ಗೋಣೆಯವರಿಗೆ ಅಮೂಲ್ಯವಾದ ಮತವನ್ನು ನೀಡಬೇಕು ಎಂದು ಅವರು ಮನವಿ ಮಾಡಿದರು.ಈ ಸಂದರ್ಭದಲ್ಲಿ ದೀಪಕ ಸಿ.ಎನ್., ಮಲ್ಲಿಕಾರ್ಜುನ ಭಟ್ಟರಹಳ್ಳಿ, ಜೋಗನಹಳ್ಳಿ ಗುರುಮೂರ್ತಿ, ಮಂಜುನಾಥ ಜಕ್ಕಣ್ಣವರ, ಶೈಲಾ ಗೋಣಿ ಸೇರಿದಂತೆ ಇತರರು ಇದ್ದರು.

Share News

About admin

Check Also

ಹಳೇಹುಬ್ಬಳ್ಳಿಯಲ್ಲಿ ಮನೆಗಳ್ಳರಿಗೆ ಖಾಕಿ ಶಾಕ್..! ಇಬ್ಬರು ಅರೆಸ್ಟ್, ₹3.45 ಲಕ್ಷದ ಚಿನ್ನಾಭರಣ ವಶ…

ಹಳೇಹುಬ್ಬಳ್ಳಿಯಲ್ಲಿ ಮನೆಗಳ್ಳರಿಗೆ ಖಾಕಿ ಶಾಕ್..! ಇಬ್ಬರು ಆರೋಪಿಗಳ ಬಂಧನ, ₹3.45 ಲಕ್ಷ ಮೌಲ್ಯದ ಚಿನ್ನಾಭರಣ ವಶ! ಹುಬ್ಬಳ್ಳಿ: ಮನೆಗೆ ಬೀಗ …

Leave a Reply

Your email address will not be published. Required fields are marked *