BIG exclusive
ಕೋಲಾರದ ಎಸಿ ಹಾಗೂ
ಪಿಡಬ್ಲ್ಯುಡಿ ಕಾರ್ಯಪಾಲಕ ಅಭಿಯಂತರರಿಗೆ ಬಂಧನದ ವಾರೆಂಟ್ಯನ್ನು ಹೈಕೋರ್ಟ್ ನ್ಯಾಯಾಧೀಶ ಸತ್ಯನಾರಾಯಣರಿಂದ ಆದೇಶ ಹೊರಡಿಸಿದೆ. ಎಸಿ, ಪಿಡಬ್ಲ್ಯುಡಿ
ಕಾರ್ಯಪಾಲಕ ಅಭಿಯಂತರರನ್ನ ಬಂಧಿಸಿ ಕೋರ್ಟ್ ಗೆ ಹಾಜರುಪಡಿಸುವಂತೆ ಎಸ್ಪಿಗೆ ನಿರ್ದೇಶನ ನೀಡಲಾಗಿದೆ. ಜೂನ್ 7 ರಂದು ಬೆಳಗ್ಗೆ 10 ಗಂಟೆಗೆ ಹೈಕೋರ್ಟ್ ಹಾಲ್ ನಂ.5 ರಲ್ಲಿ ಹಾಜರುಪಡಿಸುವಂತೆ ಆದೇಶಿಸಿದ್ದು, ಭೂಮಿ ಕಳೆದಕೊಂಡ
ದೂರುದಾರರಿಗೆ ಪರಿಹಾರ ನೀಡದಿರುವ ಹಿನ್ನಲೆಯಲ್ಲಿ ಬಂಧನ ವಾರೆಂಟ್ ಜಾರಿ ಮಾಡಲಾಗಿದೆ. ಹಿನ್ನೆಲೆ ನೋಡುವುದಾದ್ರೇ ಕೋಲಾರದ
ನರಸಾಪುರ ಹಾಗೂ ದಿನ್ನೆಹೊಸಹಳ್ಳಿಯ ರಸ್ತೆ ಅಭಿವೃದ್ದಿಗೆ ಜಮೀನು ವಶ ಪಡಿಸಿಕೊಳ್ಳಲಾಗಿತ್ತು.
2006-07 ರಲ್ಲಿ ರಸ್ತೆ ಅಭಿವೃದ್ದಿಗೆ
ಉಪವಿಭಾಗಾಧಿಕಾರಿಗಳ ಆದೇಶದ ಮೇರೆಗೆ ಪಿಡಬ್ಲ್ಯುಡಿ ಇಲಾಖೆಯ ಅಧಿಕಾರಿಗಳು ಭೂಮಿಯನ್ನ ವಶಕ್ಕೆ
ಪಡೆದಿದ್ದರು. ನರಸಾಪುರದ ಸರ್ವೆ ನಂಬರ್ 274 ರಲ್ಲಿ 9 ಗುಂಟೆ ಜಮೀನು ವಶಪಡಿಸಿಕೊಳ್ಳಬೇಕಿತ್ತು. ಆದ್ರೇ 274 ರ
ಸರ್ವೆ ನಂಬರ್ ಬದಲಾಗಿ 112/2 ರಲ್ಲಿ ಗುಂಟೆ ಜಮೀನಿನಲ್ಲಿ ರಸ್ತೆ ಅಭಿವೃದ್ದಿ ಮಾಡಿದ್ದರು. ಈ ಕುರಿತು ಸರ್ವೆ ನಂಬರ್ 112/2ರ ಜಮೀನಿನ ಮಾಲೀಕ ಚಿಕ್ಕಬೋಜಪ್ಪ ಹೈಕೋರ್ಟ್ ಮೆಟ್ಟಿಲೇರಿದ್ದರು.
ಹೈಕೋರ್ಟ್ ನಲ್ಲಿ ದೂರುದಾರ ಚಿಕ್ಕಬೋಜಪ್ಪ ವಶಪಡಿಸಿಕೊಂಡ ಭೂಮಿಗೆ
ಪರಿಹಾರ ಅಥವ ಬೇರೆ ಭೂಮಿ ನೀಡುವಂತೆ ಮನವಿ ಮಾಡಿದ್ದರು. ಹೈಕೋರ್ಟ್
ಚಿಕ್ಕಬೋಜಪ್ಪಗೆ ಪರಿಹಾರ ನೀಡುವಂತೆ ಎಸಿ ಹಾಗೂ ಪಿಡಬ್ಲ್ಯುಡಿ ಇಲಾಖೆ ಸೂಚಿಸಿತ್ತು.
ಹೈಕೋರ್ಟ್ ಆದೇಶವನ್ನು ಪಾಲಿಸದ ಎಸಿ, ಪಿಡಬ್ಲ್ಯುಡಿ ಇಲಾಖೆಯ ಅಧಿಕಾರಿಗಳು ನೀರ್ಲಕ್ಷ್ಯ ತೋರಿದ್ದರು. ಹಾಗೂ ಕೆಳ
ಹಂತದ ಅಧಿಕಾರಿಗಳನ್ನ ಹೈಕೋರ್ಟ್ ನ ವಿಚಾರಣೆಗೆ ಕಳುಹಿಸುತ್ತಿದ್ದರು. ದೂರುದಾರನಿಗೆ ಪರಿಹಾರ ನೀಡದೆ ನಿರ್ಲಕ್ಷ್ಯವಹಿಸಿದ್ದ ಹಿನ್ನಲೆಯಲ್ಲಿ
ಕೋರ್ಟ್ ಅಧಿಕಾರಿಗಳಿಗೆ ಬಂಧನದ ವಾರೆಂಟ್ ಹೊರಡಿಸಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





