Breaking News

ರಾಮಲಿಂಗರೆಡ್ಡಿಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಿದ ಮಾಜಿ ಸಿಎಮ್ ಸಿದ್ದರಾಮಯ್ಯ

ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳುವ ನಿಟ್ಟಿಯಲ್ಲಿ ಕೈ
ನಾಯಕರು ದಿನಕ್ಕೊಂದು ತಂತ್ರ ಹೂಡುತ್ತಿದ್ದರೇ ಇತ್ತ ಸಚಿವ ಸ್ಥಾನಕ್ಕಾಗಿ ಕೈ ಪಾಳಾಯದಲ್ಲೆ
ಕೆಲವರು ಅಸಮಾಧಾನದ ಅಸ್ತ್ರ ಬಳಸುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ರಮೇಶ್ ಜಾರಕಿಹೊಳಿ
ನಂತರವಾಗಿ ಹಾದಿಯಲ್ಲಿ ರಾಮಲೀಂಗರೆಡ್ಡಿಯವರು. ಈಗ ರಾಮಲಿಂಗರೆಡ್ಡಿಗೆ ಸಚಿವ ಸ್ಥಾನ ನಿಡುವುದಾಗಿ
ಕಾಂಗ್ರೇಸ್ ಪಕ್ಷದ ಸಮನ್ವಯ ಸಮಿತಿ ಅದ್ಯಕ್ಷ ಸಿದ್ದರಾಮಯ್ಯ ಹೇಳಿದ್ದಾರೆ. ಮಾಜಿ
ಸಚಿವ ರಾಮಲಿಂಗಾರೆಡ್ಡಿ ಅವರು ಹಿರಿಯ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ ಬೆನ್ನಲ್ಲೇ ತೆರವಾಗಿದ್ದ ಶಿವಳ್ಳಿ ಸ್ಥಾನವನ್ನು ಅವರಿಗೆ ನೀಡುವುದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇಂದು ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ
ಜಮೀರ್ ಅಹ್ಮದ್ ಚಾಮರಾಜಪೇಟೆಯ ಈದ್ಗಾ ಮೈದಾನಕ್ಕೆ ಆಗಮಿಸಿದ್ದರು. ಐದು ಸಾವಿರಕ್ಕೂ ಹೆಚ್ಚು
ಮುಸ್ಲಿಂ ಬಾಂಧವರು ಪ್ರಾರ್ಥನೆ ನಡೆಸಿದ್ದು, ಪ್ರಾರ್ಥನೆಯಲ್ಲಿ
ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಜಮೀರ್ ಅಹ್ಮದ್ ಪಾಲ್ಗೊಂಡಿದ್ದರು. ಈ ವೇಳೆ ಮಾದ್ಯಮದವರೊಂದಿಗೆಮಾತನಾಡಿದ ಮಾಜಿ ಸಿಎಮ್ ಸಿದ್ದರಾಮಯ್ಯನವರು ನಾನೇ ರಾಮಲಿಂಗಾರೆಡ್ಡಿ ಅವರ ಜೊತೆ ಮಾತನಾಡುತ್ತೇನೆ.
ಪುನಾರಚನೆ ಮಾಡುವಾಗ ರಾಮಲಿಂಗಾರೆಡ್ಡಿ ಅವರಿಗೆ ಮಂತ್ರಿ ಸ್ಥಾನ ನೀಡುವುದಾಗಿ ಹೇಳಲಾಗಿತ್ತು.
ಆದರೆ ಈಗ ಪುನಾರಚನೆ ಮಾಡುತ್ತಿಲ್ಲ. ಶಿವಳ್ಳಿ ನಿಧನದಿಂದ ಕಾಂಗ್ರೆಸ್ಸಿನ ಒಂದು ಸ್ಥಾನ ಖಾಲಿ
ಇದ್ದು, ಆ ಸ್ಥಾನವನ್ನು
ರಾಮಲಿಂಗಾರೆಡ್ಡಿ ಅವರಿಗೆ ನೀಡಲಾಗುತ್ತದೆ ಎಂದು ತಿಳಿಸಿದರು.

Share News

About admin

Check Also

ಸಚಿವರಿಗೆ ಖಾತೆ ಹಂಚಿದ ಸಿಎಂ ಡಿಕೆಶಿ..! ಯಾರಿಗೆ ಯಾವ ಖಾತೆ ಸಿಕ್ಕಿತು..?

ಡಿಕೆಶಿ ಸರ್ಕಾರದಲ್ಲಿ ಖಾತೆ ಫಿಕ್ಸ್..! ಕೆಲವರಿಗೆ ಹಳೆ ಖಾತೆ, ಕೆಲವರಿಗೆ ಹೊಸ ಜವಾಬ್ದಾರಿ..! ಬೆಂಗಳೂರು: ಸಚಿವರಿಗೆ ಖಾತೆ ಹಂಚಿದ ಸಿಎಂ …

Leave a Reply

Your email address will not be published. Required fields are marked *