Breaking News

ಅಭಿವೃದ್ಧಿ ಹೆಸರಲ್ಲಿ ಪುಟ್ಬಾತ್ ವ್ಯಾಪಾರಿಗಳ ತೆರವು

ಕೈಗಾರಿಕಾ ಪ್ರದೇಶವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಿ ಸ್ವಚ್ಛವಾಗಿರಿಸುವ ನಿಟ್ಟಿನಲ್ಲಿ ಪುಟ್ಬಾತ್ ವ್ಯಾಪಾರಿಗಳನ್ನು ತೆರವು ಗೊಳಿಸಿದ ಹಿನ್ನೆಲೆ ನೂರಾರು ಬೀದಿ ಬದಿ ವ್ಯಾಪಾರಿಗಳು ಪೋಲಿಸ್ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿದಂತಹ ಘಟನೆ ಬೆಂಗಳೂರು ಹೊರವಲಯ ಹೆಬ್ಬಗೋಡಿ ಪೋಲಿಸ್ ಠಾಣಾ ವ್ಯಾಪ್ತಿಯ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ, ಬೊಮ್ಮಸಂದ್ರ ಕೈಗಾರಿಕಾ ಪ್ರದೇಶ ವ್ಯಾಪ್ತಿಯಲ್ಲಿ ಸುಮಾರು 300 ರಕ್ಕೂ ಹೆಚ್ಚು ಜನ ಹೊಟ್ಟೆ ಪಡಿಗಾಗಿ ಬೀದಿ ಬದಿಯಲ್ಲಿ ಅಂಗಡಿಗಳನ್ನು ಮಾಡಿಕೊಂಡು ಜೀವನ ನಡೆಸುತ್ತಿದ್ದು ಇಂದು ಏಕಾಏಕಿ ಬೊಮ್ಮಸಂದ್ರ ಕೈಗಾರಿಕಾ ಕ್ಷೇಮಾಭಿವೃದ್ಧಿ ಸಂಘದಿಂದ ಪೋಲಿಸರ ರಕ್ಷಣೆ ಪಡೆದು ಇಂದು ಏಕಾಏಕಿ ಬೀದಿ ಬದಿ ವ್ಯಾಪಾರಿಗಳ ಅಂಗಡಿಗಳನ್ನು ತೆರವು ಗೊಳಿಸುತ್ತಿದ್ದಾರೆ,ಇನ್ನು ಇದರಿಂದ ಆಕ್ರೋಶ ಗೊಂಡ ನೂರಾರು ಜನ ವ್ಯಾಪಾರಿಗಳು ಹೆಬ್ಬಗೋಡಿ ಪೋಲಿಸ್ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿದ್ದು ಸಾಕಷ್ಟು ವರ್ಷಗಳಿಂದ ಇಲ್ಲಿ ಸಾಲಸೋಲವನ್ನು ಮಾಡಿ ಅಂಗಡಿ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ ನಮಗೆ ಯಾವುದೇ ಮಾಹಿತಿಯನ್ನು ಕೊಡದೆ ಇಂದು ಏಕಾಏಕಿ ಬಂದು ಅಂಗಡಿ ಶೇಡ್ ಗಳನ್ನು ತೆರವು ಗೊಳಿಸುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು, ನಂತರ ಪ್ರತಿಭಟನಾ ನಿರತರನ್ನು ಮನವೊಲಿಸಿದ ಹೆಬ್ಬಗೋಡಿ ಪೋಲಿಸರು ಬೊಮ್ಮಸಂದ್ರ ಕೈಗಾರಿಕಾ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪ್ರಸಾದ್ ರನ್ನು ಕರೆಸಿ ಮಾತುಕತೆ ನಡೆಸಿ ಪುಟ್ಬಾತ್ ನಿರ್ಮಾಣವಾದ ನಂತರ ಶೇಡ್ಗಳ ಮೂಲಕ 200 ಅಂಗಡಿಗಳನ್ನು ಮಾಡಿಕೊಡಲಾಗುವುದು ಎಂದು ತಿಳಿಸಿದರು.

Share News

About admin

Check Also

ಮೈಸೂರುನಲ್ಲಿ ಸ್ಫೋಟಕಗಳು ಪತ್ತೆ

ಮೈಸೂರು: ಸ್ಫೋಟಕಗಳು ಪತ್ತೆಯಾಗಿರುವ ಘಟನೆ ಟಿ.ನರಸೀಪುರ ತಾಲೂಕಿನ ಕೆಂಪಯ್ಯನಹುಂಡಿ ಗೇಟ್ ಬಳಿಯ ಹೋಟೆಲ್ ವೊಂದರಲ್ಲಿ ನಡೆದಿದೆ. ಅಪರಿಚಿತರು ನೀಲಿ ಬಣ್ಣದ …

Leave a Reply

Your email address will not be published. Required fields are marked *