Breaking News

ಬೆಂಗಳೂರು ಗ್ರಾಮಾಂತರ

ಸೈಬರ್ ವಂಚನೆ: ₹95,000 ಹಣ ಕಳೆದುಕೊಂಡ ವೈದ್ಯ!!

ದಾಸಣ್ಣ ಅವರ ದೂರಿ ಪ್ರಕಾರ ತಮ್ಮ ಮನೆಯ ಬಾತ್‌ರೂಮ್‌ನ ಕಮೋಡ್ ಅನ್ನು ಸರಿಪಡಿಸಲು ಆನ್‌ಲೈನ್ ಮೂಲಕ ಪ್ಲಂಬರ್ ಸೇವಾ ತಜ್ಞನೊಬ್ಬನನ್ನು ಹುಡುಕಲು ಪ್ರಯತ್ನಿಸಿದ್ದರು. ಈ ಸಂದರ್ಭದಲ್ಲಿ 7003975127 ಎಂಬ ಸೈಬರ್ ಕಳ್ಳ ತನ್ನ ಮೊಬೈಲ್ ನಂಬರ್‌ನಿಂದ ದಾಸಣ್ಣ ಅವರಿಗೆ ಮೆಸೇಜ್‌ವೊಂದು ಕಳಿಸಿದ್ದಾನೆ. ನಂತರ ಈ ನಂಬರ್‌ನಿಂದ ಅವರ ವಾಟ್ಸ್‌ಅಯಪ್ ನಂಬರ್‌ಗೆ ಅಪರೂಪದ .apk ಫೈಲ್‌ವೊಂದನ್ನು ಕಳುಹಿಸಲಾಗಿದೆ.ದಾಸಣ್ಣ ಅವರು ಆ ಫೈಲ್ ಓಪನ್ ಮಾಡಿದ ನಂತರ, ಅವರ ಮೊಬೈಲ್ ಫೋನ್‌ನಲ್ಲಿದ್ದ ಬ್ಯಾಂಕ್ …

Read More »

ಬಸ್​​ಗೆ ಬೈಕ್ ಡಿಕ್ಕಿ : 2 ಸಾವು

ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ): ಓವರ್ ಟೇಕ್ ಮಾಡುವ ಭರದಲ್ಲಿ ಎದುರಿಗೆ ಬಂದ ಬಸ್​​ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್​ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ಮಾಕಳಿ ಗ್ರಾಮದ ಬಳಿ ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ಯಲಹಂಕ ತಾಲೂಕಿನ ತಿಂಡ್ಲು ಗ್ರಾಮದ ಮಂಜುನಾಥ್ (24) ಹಾಗೂ ನಿಖಿಲ್ (19) ಮೃತರು. ಇವರು ಬೈಕ್​​ನಲ್ಲಿ ಗೌರಿಬಿದನೂರು ಕಡೆಯಿಂದ ದೊಡ್ಡಬಳ್ಳಾಪುರದತ್ತ ಬರುತ್ತಿದ್ದರು. ಮುಂದಿನ ವಾಹನವನ್ನ ಓವರ್ ಟೇಕ್ ಮಾಡುವ ಭರದಲ್ಲಿ …

Read More »

ವೈದ್ಯರಿಲ್ಲದೆ ರೋಗಿಗಳ ಪರದಾಟ, ಮಾಹಿತಿ ಸಿಕ್ಕರೂ ಸ್ಥಳಕ್ಕೆ ಬಾರದ ಆರೋಗ್ಯಾಧಿಕಾರಿ

ವೈದ್ಯರಿಲ್ಲದೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯದೆ ರೋಗಿಗಳು ಪರದಾಡಿ ಪ್ರತಿಭಟನೆ ನಡೆಸಿರುವ ಘಟನೆ ಬೆಂಗಳೂರು ಹೊರವಲಯ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಸಿಂಗಸಂದ್ರದಲ್ಲಿ ನಡೆದಿದೆ. ಸಿಂಗಸಂದ್ರ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯಕೇಂದ್ರವಿದ್ದು ವೈದ್ಯರುಯಾವುದೇಮಾಹಿತಿ ನೀಡದೆ ಏಕಾಏಕಿ ರಜೆ ಹಾಕಿದ್ದು ಮಾಹಿತಿ ತಿಳಿಯದ ನೂರಾರು ರೋಗಿಗಳು ಗರ್ಭಿಣಿ ಮಹಿಳೆಯರು ಆಸ್ಪತ್ರೆಗೆ ಆಗಮಿಸಿ ವೈದ್ಯರಿಗಾಗಿ ಕಾದು ಕುಳಿತಿದ್ದರು. 12 ಗಂಟೆಯಾದರೂ ವೈದ್ಯರು ಬಾರದ ಹಿನ್ನೆಲೆ ಹಲವು ರೋಗಿಗಳು ಅಸ್ವಸ್ಥರಾಗಿ ಆಸ್ಪತ್ರೆಯ ಮುಂಭಾಗದಲ್ಲೇ ಮಲಗಿದ್ದರು . ಇನ್ನು …

Read More »

ನೂರಾರು ಜನರಿಂದ ಅಂತಾರಾಷ್ಟ್ರೀಯ ಯೋಗದಿನ ಆಚರಣೆ

ಇಂದು 5 ನೇ ಅಂತಾರಾಷ್ಟ್ರೀಯ ಯೋಗದಿನವಾಗಿದ್ದು ಈ ಹಿನ್ನೆಲೆ ದೇಶಾದ್ಯಂತ ಬೃಹತ್ ಯೋಗ ಶಿಬಿರಗಳನ್ನ ಆಯೋಜಿಸುವ ಮೂಲಕ ಯೋಗ ದಿನವನ್ನು ಆಚರಿಸಲಾಗುತ್ತಿದೆ, ಅಂತೆಯೇ ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದಲ್ಲಿ ಸಾರ್ವಜನಿಕವಾಗಿ ಯೋಗದಿನವನ್ನು ಅಂತಾರಾಷ್ಟ್ರೀಯ ಯೋಗದಿನ ಆಚರಣಾ ಸಮಿತಿಯಿಂದ ಆಚರಿಸಲಾಯಿತು. ಆನೇಕಲ್ ಪಟ್ಟಣದ ಶ್ರೀರಾಮ ಕುಟೀರದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗದಿನಾಚಾರಣೆಯಲ್ಲಿ ಪಟ್ಟಣದ ನೂರಾರು ಜನ ಯೋಗಪಟುಗಳು ಹಾಗು ಶಾಲಾ ವಿಧ್ಯಾರ್ಥಿಗಳು ಭಾಗವಹಿಸಿ ಯೋಗದ ಆಸನಗಳನ್ನು ಪ್ರದರ್ಶಿಸಿವ ಮೂಲಕ 5 ನೇ ಅಂತಾರಾಷ್ಟ್ರೀಯ …

Read More »

ಅಹಿಂಸೆ ಪ್ರತಿಪಾದನೆಗಾಗಿ 19 ಸಾವಿರ ಕಿಲೋಮೀಟರ್ ಪಾದಯಾತ್ರೆ ಮಾಡುತ್ತಿರುವ ಜೈನ ಮುನಿ.

ಪ್ರಪಂಚದಲ್ಲಿ ಅಹಿಂಸೆ ಸಮರತೆ ನೈತಿಕತೆ ವ್ಯಸನಮುಕ್ತಿಗಾಗಿ ಜೈನ ಮುನಿಯೊಬ್ಬರು ಮೂರು ದೇಶ 19 ರಾಜ್ಯಗಳಲ್ಲಿ ಉಪದೇಶ ಮಾಡುತ್ತ ಸುಮಾರು19 ಸಾವಿರ ಕಿಲೋಮೀಟರ್ ಪಾದಯಾತ್ರೆ ಹಮ್ಮಿಕೊಂಡಿದ್ದು ಇಂದು ಆ ಜೈನ ಮುನಿ ಕರ್ನಾಟಕ ಗಡಿಭಾಗ ಅತ್ತಿಬೆಲೆಗೆ ಪ್ರವೇಶಿಸಿದ್ದಾರೆ.ಇನ್ನು ಜೈನ ಮುನಿ ಆಚಾರ್ಯ ಮಾಹಾಶ್ರಮಣ್ ಸ್ವಾಮಿಜಿಯವರನ್ನು ಇಲ್ಲಿನ ಜೈನ ಧರ್ಮದ ಸುಮಾರು 10,000 ಜನರು ಬರಮಾಡಿಕೊಂಡಿದ್ದು ಮಹಾಶ್ರಮಣ್ ಜೈನ ಮುನಿ 2014 ರ ನವಂಬರ್ 14 ರಂದು ದೆಹಲಿಯ ಕೆಂಪುಕೋಟೆಯಿಂದ ಪ್ರಪಂಚದಲ್ಲಿ ಸಮರಸತೇ …

Read More »

ಟಿಕ್ ಟಾಕ್ ಹುಚ್ಚೇರಿದ್ದ ಯುವಕನ ಸ್ಪೈನಲ್ ಕಾರ್ಡ್ ಮುರಿತ.

ಟಿಕ್ ಟಾಕ್ ಹುಚ್ಚೇರಿದ್ದ ಯುವಕ ತನ್ನ ಸ್ಪೈನಲ್ ಕಾರ್ಡ್ ಮುರಿದುಕೊಂಡ ಘಟನೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗೋಡೆಗೆರೆ ಗ್ರಾಮದಲ್ಲಿ ನಡೆದಿದೆ. ಸ್ನೇಹಿತನ ಜೊತೆ ಟಿಕ್ ಟಾಕ್ ವಿಡಿಯೋ ಮಾಡುತ್ತಾ ಸಾಹಸ ಮಾಡಲು ಹೋಗಿ ಸ್ಪೈನಲ್ ಕಾರ್ಡ್ ಮುರಿದಿದೆ. ಕುಟುಂಬಕ್ಕೆ ಆಧಾರವಾಗಿದ್ದ ಕುಮಾರ್ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ಆಸ್ಪತ್ರೆಯ ಚಿಕಿತ್ಸೆಗೆ 10 ಲಕ್ಷ ರೂ ಖರ್ಚಾಗಲಿದ್ದು ಆಸ್ಪತ್ರೆಯ ಚಿಕಿತ್ಸೆಗೆ 10 ಲಕ್ಷ ರೂ ಖರ್ಚಾಗಲಿದ್ದು ಸಹಾಯ ಆಸ್ತ ಚಾಚೂತ್ತಿರುವ ಬಡ …

Read More »

ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್ ಮಾಡಿ ಪ್ರತಿಭಟನೆ

ವೈಧ್ಯರ ಮೇಲಿನ ಹಲ್ಲೆ ಖಂಡಿಸಿ ಇಂದು ರಾಜ್ಯಾದಾದ್ಯಂತ ಪ್ರತಿಭಟನೆ ನಡೆಸಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆ ಆನೇಕಲ್ನ ಚಂದಾಪುರದಲ್ಲಿರುವ ನಾರಾಯಣ ಹೃದಯಾಲಯ, ಸೇರಿದಂತೆ ಬಹುತೇಕ ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್ ಮಾಡಿ ಪ್ರತಿಭಟನೆಗೆ ವೈದ್ಯರು ಬೆಂಬಲ ಸೂಚಿಸಿದ್ದಾರೆ. ಸುಮಾರು ೩೦೦ ಕ್ಕು ನಾರಾಯಣ ಹೃದಯಲಯದ ವೈದ್ಯರು ಬೆಂಬಲ ನೀಡಿದ್ದಾರೆ, ಇನ್ನೂ ತುರ್ತು ಪರಿಸ್ಥಿಯಲ್ಲಿ ಹೃದಯಾಘಾತ, ಅಪಘಾತದಂತಹ ಪ್ರಕರಣಗಳಿಗೆ ಕೂಡಲೆ ಚಿಕಿತ್ಸೆ ನೀಡುವುದಾಗಿ ನಾರಾಯಣ ಹೃದಯಲದ ಆಡಳಿತ ಮಂಡಳಿ ಮಾಹಿತಿ ನೀಡಿದ್ದಾರೆ.

Read More »

ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ, ನವಜಾತ ಶಿಶು ಸಾವು

ವೈದ್ಯರ‌ ನಿರ್ಲಕ್ಷ್ಯ ದಿಂದ ನವಜಾತ ಶಿಶು ಸಾವಾನ್ನಪ್ಪಿದ ಘಟನೆ ಆನೇಕಲ್ ತಾಲ್ಲೂಕಿನ ಹಾರಗದ್ದೆಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ. ದಾವಣಗೆರೆಯಿಂದ ಬಂದು ವಡ್ಡರಪಾಳ್ಯದಲ್ಲಿ ನೆಲೆಸಿದ್ದ ದಂಪತಿಗಳಾದ ಶಶಿಧರ್ ಮತ್ತು ರಂಜಿತಾ ಎಂಬುವರಿಗೆ ಸೇರಿದ ಮಗುವಾಗಿದೆ. ನಿನ್ನೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಿದ್ದರು.ಆದ್ರೇ ವೈದ್ಯರಿಲ್ಲದೆನೆ ನರ್ಸ್ ಕಡೆಯಿಂದ ಹೆರಿಗೆ ಮಾಡಿಸಿದ್ದರು. ಮಗು ಉಸಿರಾಟದ ತೊಂದರೆ ಇದೇ ಎಂದು ನರ್ಸ್ ಬೇರೆ ಆಸ್ಪತ್ರೆಗೆ ಹೋಗುವಂತೆ ಸೂಚಿಸಿದ್ದರು. ಆದ್ರೇ ಖಾಸಗಿ …

Read More »

ಶಶಿಕಲಾ ಭೇಟಿಗೆ ಆಗಮಿಸಿದ ಟಿಟಿವಿ ದಿನಕರನ್

ಅಕ್ರಮ ಆಸ್ತಿ ಗಳಿಕೆ ಆರೋಪದಡಿಯಲ್ಲಿರುವ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ಶಶಿಕಲಾ ಭೇಟಿಗೆ ಇಂದು ಟಿಟಿವಿ ದಿನಕರನ್ ಆಗಮಿಸಿದ್ದರು. ಸುಮಾರು ಒಂದು ಗಂಟೆಗಳ ಕಾಲ ಮಾತನಾಡಲು ವಿಷೇಶ ಅನುಮತಿ ಪಡೆದಿರುವ ಟಿಟಿವಿ ದಿನಕರನ್ ತಮ್ಮ ಪಕ್ಷದ ಮುಖಂಡರುಗಳು ಜೊತೆ ಶಶಿಕಲಾರ ಭೇಟಿ ಮಾಡಿ ಶಶಿಕಲಾ ಆರೋಗ್ಯದ ಬಗ್ಗೆ ಮುಂದಿನ ತಮಿಳುನಾಡಿನ ರಾಜಕೀಯ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು.

Read More »

ಕ್ರೈನ್ ಡಿಕ್ಕಿ ಪಾದಚಾರಿ ಸ್ಥಳದಲ್ಲೇ ಸಾವು.

ಪಾದಚಾರಿಗೆ ಕ್ರೈನ್ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ಸಮೀಪದಲ್ಲಿ ಸಂಭವಿಸಿದೆ. ಅತ್ತಿಬೆಲೆಯ ಚಾಮರಾಜನಗರದ ನಿವಾಸಿ ಕೆ.ಎಂ.ಮಹೇಂದ್ರ(29) ಸಾವನಪ್ಪಿದ ದುರ್ದೈವಿ. ಕ್ರೈನ್ ಚಾಲಕ ಎತ್ತರದಲ್ಲಿದ್ದು ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹೇಂದ್ರ ಕಾಣದೆ ಅವಘಡ ಸಂಭವಿಸಿದೆ. ಅಪಘಾತದ ನಂತರ ಕ್ರೈನ್ ಚಾಲಕ ಪರಾರಿಯಾಗಿದ್ದಾನೆ. ಅತ್ತಿಬೆಲೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ಚಾಲಕನಿಗಾಗಿ ಪೋಲಿಸರು …

Read More »