ಕ್ಷುಲ್ಲಕ ಕಾರಣಕ್ಕಾಗಿ ಎರಡು ರಾಜಕೀಯ ಬೆಂಬಲಿತರ ಮಧ್ಯೆ ಘರ್ಷಣೆ ಸಂಬವಿಸಿದ ಘಟನೆ ಕೋಲಾರದ ಮಾಲೂರು ಪಟ್ಟಣದಲ್ಲಿ ನಡೆದಿದೆ. ಬಿಜೆಪಿ ಬೆಂಬಲಿತ ಪುರಸಭೆ ಸದಸ್ಯ ಹಾಗೂ ಕೈ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದ್ದು, ಮಾಲೂರು ತಾಲೂಕು ಕಛೇರಿ ಎದುರು ಪರಸ್ಪರ ಕೈಕೈ ಕಾರ್ಯಕರ್ತರು ಮಿಲಾಯಿಸಿ ಕೊಂಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತ ಹರೀಶ್ ಗೌಡನ ಮೇಲೆ ಬಿಜೆಪಿ ಕಾರ್ಯಕರ್ತರ ಹಲ್ಲೆ ಎಂಬ ಆರೋಪ ಮಾಡಲಾಗಿದ್ದು, ಪುರಸಭೆ ಸದಸ್ಯ ಭಾನು ತೇಜ, ನವೀನ್, ಚೇತನ್ ಕುಮಾರ್, ಯಶವಂತ್ ಎನ್ನುವರಿಂದ ಹಲ್ಲೆ ನಡೆದಿದೆ ಎಂದು ಕೈ ಕಾರ್ಯಕರ್ತರು ಆರೋಪ ಮಾಡಿದ್ದಾರೆ. ಗಾಯಾಳು ಹರೀಶ್ ಗೌಡನನ್ನು ಮಾಲೂರು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಾಲೂರು ಕಾಂಗ್ರೆಸ್ ಶಾಸಕ ಕೆ ವೈ ನಂಜೇಗೌಡ ಆಸ್ಪತ್ರೆಗೆ ಭೇಟಿ ನೀಡಿ ಹರೀಶ್ ಗೌಡ ಆರೋಗ್ಯ ವಿಚಾರಣೆ ಮಾಡಿದರು. ಈ ಕುರಿತು ಮಾಲೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





