ಠೇವಣಿ ಇಟ್ಟ ಹಣ ಸಿಗದಿದ್ದಕ್ಕೆ ಹೃದಯಾಘಾತದಿಂದ ವ್ಯಕ್ತಿ ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ಶಹರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಸವರಾಜ್ ಆದರಗಿ(೪೦) ಎಂಬ ವ್ಯಕ್ತಿ ಸಾವನ್ನಪ್ಪಿದ್ದಾನೆ. ಕಳೆದ 15 ವರ್ಷದ ಹಿಂದೆ 3,70,000 ಸಾವಿರ ಹಣವನ್ನು ಗೋಕಾಕನ ಜಗದ್ಗುರು ರೆಣುಕಾಚಾರ್ಯ ಮಹಿಳಾ ಪತ್ತಿನ ಸಹಕಾರಿ ಸೊಸೈಟಿಯಲ್ಲಿ ಠೇವಣಿ ಇಟ್ಟಿದ್ದ . ಠೇವಣಿ ಹಣ ಹಿಂದಿರುಗಿಸದಕ್ಕೆ ನೊಂದ ವ್ಯಕ್ತಿಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾನೆ. ಇದರಿಂದ ಆಕ್ರೋಶ ಗೊಂಡ ಕುಟುಂಬಸ್ಥರು ಸೋಸೈಟಿ ಎದುರು ಶವ ವಿಟ್ಟು ಪ್ರತಿಭಟನೆ ಮಾಡಿದರು. ಸೋಸೈಟಿ ಅದ್ಯಕ್ಷರು ಹಾಗೂ ಸದಸ್ಯರ ವಿರುದ್ದ ದಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





