ಬಹ್ರೈಚ್ (ಉತ್ತರ ಪ್ರದೇಶ): ಅಕ್ರಮ ಗೋದಾಮಿನ ಮೇಲೆ ಅಧಿಕಾರಿಗಳು ನಡೆಸಿದ ಜಂಟಿ ದಾಳಿಯಲ್ಲಿ ಕೊಡೈನ್ ಅಂಶವಿರುವ 8,000ಕ್ಕೂ ಹೆಚ್ಚು ಕೆಮ್ಮಿನ ಸಿರಪ್ ಬಾಟಲಿಗಳನ್ನು ವಶಪಡಿಸಿಕೊಂಡಿದ್ದು, ಔಷಧ ವ್ಯಾಪಾರಿಯೊಬ್ಬನನ್ನು ಎನ್‌ಡಿಪಿಎಸ್ ಕಾಯ್ದೆಯಡಿ ಬಂಧಿಸಿದ್ದಾರೆ. ದರ್ಗಾ ಷರೀಫ್ ಪೊಲೀಸ್ ವ್ಯಾಪ್ತಿಯ ಪರ್ಸೌರಾ ಗ್ರಾಮದಲ್ಲಿ ಪರವಾನಗಿ ಇಲ್ಲದೆ ಗೋದಾಮಿನಲ್ಲಿ ಸಿರಪ್ ಸಂಗ್ರಹಿಸಿದ್ದ ಅಜಯ್ ಕುಮಾರ್ ಯಾದವ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಬೇರೆ ವಿಳಾಸಕ್ಕೆ ಮಾತ್ರ ಔಷಧ ಮಾರಾಟ ಪರವಾನಗಿ ಹೊಂದಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ ರೂಪೈದೆಹಾ ಪ್ರದೇಶದಲ್ಲೂ 2,000ಕ್ಕೂ ಹೆಚ್ಚು ಕೊಡೈನ್ ಕೆಮ್ಮಿನ ಸಿರಪ್ ಬಾಟಲಿಗಳು ಹಾಗೂ ನಿಷೇಧಿತ ಮಾತ್ರೆಗಳನ್ನು ಜಪ್ತಿ ಮಾಡಿ ಮತ್ತೋರ್ವ ಆರೋಪಿಯನ್ನು ಬಂಧಿಸಲಾಗಿದೆ. ಈ ಜಾಲದ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

