Breaking News

ಭಯೋತ್ಪಾದನೆಗೆ ಬೆಂಬಲ ನೀಡೋರು ಉಗ್ರರ ಕೃತ್ಯಗಳಿಗೆ ಜವಾಬ್ದಾರರು: ಪಾಕ್​ಗೆ ಮೋದಿ ಟಾಂಗ್

ಬಿಷ್ಕೇಕ್​: ಕಿರ್ಗಿಸ್ತಾನ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಶಾಂಘೈ ಸಹಕಾರ ಸಂಘದ ಶೃಂಗ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪಾಕಿಸ್ತಾನದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ರು.
‘ಭಯೋತ್ಪಾದನೆಗೆ ಬೆಂಬಲ ನೀಡುವ ರಾಷ್ಟ್ರಗಳನ್ನ ಬಯೋತ್ಪಾದಕರು ನಡೆಸುವ ಕೃತ್ಯಗಳಿಗೆ ಜವಾಬ್ದಾರರನ್ನಾಗಿ ಮಾಡಬೇಕು. ಕಳೆದ ಭಾನುವಾರ ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದೆ. ಆ ವೇಳೆ ಅಲ್ಲಿನ ಸೆಂಟ್​ ಅಂತೋನಿ ಚರ್ಚ್​ಗೆ ಭೇಟಿ ನೀಡಿದ್ದೆ. ಆಗ ನನಗೆ ಆ ಮುಗ್ಧ ಜೀವಗಳನ್ನು ಬಲಿ ತೆಗೆದುಕೊಂಡ ಬಯೋತ್ಪಾದಕರ ಕರಾಳ ಮುಖದ ದರ್ಶನವಾಯಿತು. ಭಯೋತ್ಪಾದನೆಯ ಭೀತಿಯನ್ನು ಎದುರಿಸಲು, ಅದರ ವಿರುದ್ಧ ಹೋರಾಡಲು ದೇಶಗಳು ತಮ್ಮ ಸಂಕುಚಿತ ವ್ಯಾಪ್ತಿಯಿಂದ ಹೊರಬರಬೇಕು. ಎಲ್ಲರೂ ಒಟ್ಟಿಗೆ ಹೋರಾಡಬೇಕು ಅಂತಾ ಪರೋಕ್ಷವಾಗಿ ಪಾಕ್​ಗೆ ಟಾಂಗ್​ ನೀಡಿದ್ರು. ಈ ವೇಳೆ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಕೂಡಾ ಉಪಸ್ಥಿತರಿದ್ದರು. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಎಸ್​ಸಿಒ ಪಾತ್ರ ಮತ್ತು ವಿಶ್ವಾಸಾರ್ಹತೆಯನ್ನು ವೃದ್ಧಿಸುವ ಕೆಲಸ ಮಾಡಿದ್ದು, ಇದನ್ನೇ ಮುಂದುವರೆಸುವುದಾಗಿ ಹೇಳಿದ್ರು. ಅಲ್ಲದೇ ಭಯೋತ್ಪಾದನೆ ಕುರಿತು ಜಾಗತಿಕ ಸಮ್ಮೇಳನವನ್ನು ಆಯೋಜಿಸುವಂತೆ ಎಸ್​ಸಿಒ ಮುಖಂಡರಿಗೆ ಒತ್ತಾಯಿಸಿದ್ರು.

Share News

About admin

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *