Breaking News

ಕೋಟ್ಯಾಂತರ ಬೆಲೆ ಬಾಳುವ ಜಮೀನು ಗುಳುಂ

ಕೋಟ್ಯಾಂತರ ಬೆಲೆ ಬಾಳುವ ಜಮೀನನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ ಲಪಟಾಯಿಸಿರುವುದು ಬೆಳಕಿಗೆ ಬಂದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಕಾಳನಾಯಕನಹಳ್ಳಿ ಗ್ರಾಮದಲ್ಲಿ ಜಮೀನು ಕಳೆದುಕೊಂಡ ರೈತರು ಆರೋಪ ಮಾಡಿದ್ದಾರೆ. ವಿಜಯಪುರ – ಕೋಲಾರ ಮುಖ್ಯರಸ್ತೆಯಲ್ಲರುವಸರ್ವೇ ನಂ 42 ರಲ್ಲಿ ಭಾರಿ ಗೋಲ್ ಮಾಲ್ ಆಗಿದ್ದು, ಆಂಜಿನಪ್ಪ ಎಂಬುವರಿಂದ ಭೂಕಬಳಿಕೆಯಾಗಿದೆ ಎಂದು ಆರೋಪ ಮಾಡಿದ್ದಾರೆ. ಪ್ರಮುಖವಾಗಿ ಈ ಜಾಗದ ಬಗ್ಗೆ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಖರಾಬು ಜಮೀನು ಪರಬಾರೆ ಮಾಡಬಾರದೆಂಬ ಸರ್ಕಾರದ ಆದೇಶವೂ ಇದೆ. ಆದ್ರೇ ಅಧಿಕಾರಿಗಳು ಮಾತ್ರ ಸರ್ಕಾರದ ಆದೇಶವನ್ನು ಉಲ್ಲಘಂನೆ ಮಾಡಿ ರೈತರಿಗೆ ನೋಟೀಸ್ ನೀಡಿದ್ದಾರೆ. ಈ ಒಂದು ಹಗರಣದಲ್ಲಿ ಕಂದಾಯ ಇಲಾಖಾ ಅಧಿಕಾರಿಗಳು ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ. ಇನ್ನೂ ನ್ಯಾಯ ಕೇಳಲು ಹೋದರೆ ರೈತರಿಗೆ ಬೆದರಿಕೆ ಕರೆ, ರೈತ ನಾಗರಾಜು ಎಂಬುವರಿಗೆ ಜೀವ ಬೆದರಿಕೆಯೂ ಹಾಕಿದ್ದಾರೆ.

Share News

About admin

Check Also

ಕೈ ಕೊಟ್ಟ ಹುಡುಗಿ ಪ್ರೇಮಿ ದಗ ದಗ ಕಾಲೇಜು ಪ್ರೀತಿ ಜೀವನ್ಮರಣ ಹೋರಾಟ

ಆರು ವರ್ಷದಿಂದ ಪ್ರೀತಿಸಿದ ಹುಡುಗಿ ಕೈಕೊಟ್ಟಿದ್ದಾಳೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಗಿರೀಶ್ ಎಂಬುವವನು ಚೊಕ್ಕ ಹಳ್ಳಿಯ ಚಿಕ್ಕಬಳ್ಳಾಪುರದವನಾಗಿರುತ್ತಾನೆ. ಆರು …

Leave a Reply

Your email address will not be published. Required fields are marked *