ಶಾಂತಿಗಾಗಿ
ಹಂಬಲಿಸುತ್ತಿರುವ ಬೆಳಗಾವಿ ಜಿಲ್ಲೆಯಲ್ಲಿ ಎಂಇಎಸ್ ಸಂಘಟನೆಯ ಕಾರ್ಯಕರ್ತರು ಮತ್ತೆ ಪುಂಡಾಟ ಆರಂಭಸಿದ್ದಾರೆ. ನಗರದಲ್ಲಿ ಕನ್ನಡ ನಾಮಫಲಕ ಹಾಕಿ ಎಂದ ಕರವೇ ಕಾರ್ಯಕರ್ತರಿಗೆ ಎಮ್ ಈ ಎಸ್ ನಿಂದನೆ ಮಾಡಿದ್ದಾರೆ. ಬೆಳಗಾವಿ ಟಿಳಕವಾಡಿ ಭಾಗದಲ್ಲಿ ಇಂಗ್ಲಿಷ್ ನಾಮಫಲಕಗಳಿದ್ದವು. ಆದ್ರೇ ಕಳೆದ ರಡುವಾರಗಳ ಹಿಂದೆ 10 ದಿನಗಳಲ್ಲಿ ಕನ್ನಡ ನಾಮಫಲಕ ಹಾಕುವಂತೆ ಕರವೇ ಕಾರ್ಯಕರ್ತರು ಮನವಿ ಮಾಡಿದ್ದರು. ನಂತರ ಇದೇ ಸ್ಥಳಕ್ಕೆ ಹೋಗಿ ಎಂಇಎಸ್ ಕಾರ್ಯಕರ್ತನಿಂದ ಫೆಸ್ ಬುಕ್
ಲೈವ್ ಮಾಡಿ ಕನ್ನಡಿಗರ ವಿರುದ್ಧ ಅವಾಚ್ಯ ಶಬ್ದ ಬಳಸಿ ನಿಂದನೆ ಮಾಡಿದ್ದಾರೆ. ಹಾಗೂ ಕನ್ನಡದಲ್ಲಿ ಬೋರ್ಡ್ ಹಾಕೋ
ಅವಶ್ಯಕತೆ ಇಲ್ಲ ಎಂದು ಅಂಗಡಿ ಮಾಲೀಕರಿಗೆ ಒತ್ತಡ ಹಾಕಿದ್ದು, ನಂತರ ಕನ್ನಡ
ನಾಮಫಲಕ ಎಂಇಎಸ್ ಕಾರ್ಯಕರ್ತರು ಕಿತ್ತೆಸೆದಿದ್ದಾರೆ. ಇದು ಬೆಳಗಾವಿಯಲ್ಲಿ ಆಶಾಂತಿ ವಾತವರಣಕ್ಕೆ ಎಡೆ ಮಾಡಿಕೊಟ್ಟಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





