Breaking News

ಲಂಚಕ್ಕೆ ಬೇಡಿಕೆ – ಕೋಲಾರ ನಗರಸಭೆಯ ಆರ್‌ಐ ‍‍‍& ಬಿಲ್ ಕಲೆಕ್ಟರ್ ‘ಲೋಕಾ’ ಬಲೆಗೆ!

ಕೋಲಾರ : ನಿವೇಶನ ಸಂಬಂಧ ವರದಿ ನೀಡಲು ಲಂಚಕ್ಕೆ ಬೇಡಿಕೆ ಇಟ್ಟ ಕೋಲಾರ ನಗರಸಭೆಯ ಆರ್‌ಐ ಹಾಗೂ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕೋಲಾರ ನಗರಸಭೆ ಆರ್‌ಐ ಕಿರಣ್ ಕುಮಾರ್ ಹಾಗೂ ಬಿಲ್ ಕಲೆಕ್ಟರ್ ನಟರಾಜ್ ಮತ್ತು ಬ್ರೋಕರ್ ವೆಂಕಟೇಶಪ್ಪ ಲೋಕಾ ಅಧಿಕಾರಿಗಳ ಬಲೆಗೆ ಬಿದ್ದ ಆರೋಪಿಗಳು. ಕೋಲಾರ ನಗರಸಭೆ ಆವರಣದಲ್ಲಿ ಮುನಾವರ್ ಎಂಬುವರಿಂದ 15 ಸಾವಿರ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ DYSP ವೆಂಕಟೇಶ್ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಲೋಕಾ ಕೈಗೆ ಸಿಕ್ಕಿಬಿದ್ದ ಮೂವರನ್ನು ವಶಕ್ಕೆ ಪಡೆದ ಕೋಲಾರ ಲೋಕಾ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

Share News

About BigTv News

Check Also

ಉಸಿರುಗಟ್ಟಿಸಿ ಪತಿಯ ಹತ್ಯೆ; ಪತ್ನಿ ಸೇರಿ ಮೂವರ ಬಂಧನ

ಬೆಂಗಳೂರು: ಪಾರ್ಶ್ವವಾಯುವಿನಿಂದ ಹಾಸಿಗೆ ಹಿಡಿದಿದ್ದ ಪತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಬಿಂಬಿಸಿದ ಆರೋಪದಡಿ ಪತ್ನಿ ಸೇರಿದಂತೆ ಮೂವರನ್ನು …

Leave a Reply

Your email address will not be published. Required fields are marked *